ಜೀನಹಳ್ಳಿ ಗ್ರಾಮವು ಈಗಾಗಲೆ 20 ವರ್ಷಗಳ ಹಿಂದೆ ಮಂಡಳ್ ಪಂಚಾಯಿತಿ ಇದ್ದಾಗ ಕೆಂಚಿಕೊಪ್ಪದ ಮಂಡಳ ಪಂಚಾಯಿತಿಗೆ ಸೇರಿತ್ತು.ಆದಾದ ನಂತರ ಗ್ರಾಮ ಪಂಚಾಯಿತಿ ವಿಂಗಡಣೆ ಸಂದರ್ಭದಲ್ಲಿ ಜೀನಳ್ಳಿ ಗ್ರಾಮವನ್ನು ಗುಡ್ಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿಸಲು
ಗ್ರಾಮಸ್ಥರ ಅಭಿಪ್ರಾಯ ಕೇಳಿದ್ದರು.ಆಗ ಗ್ರಾಮಸ್ಥರು ಗುಡ್ಡಳ್ಳಿ ಗ್ರಾಮವು ಶಿಕಾರಿಪುರ ಗಡಿಗೆ ಬರುತ್ತದೆ, ಜನರಿಗೆ ಓಡಾಡಲಿಕ್ಕೆ ವಾಹನ
ಸೌಕರ್ಯ ಇರುವುದಿಲ್ಲ, ಮತ್ತು ಜನರ ಅಭಿಪ್ರಾಯದ ಮೇಲೆ, ಜೀನಳ್ಳಿ ಗ್ರಾಮವನ್ನು ಕತ್ತಿಗಿ ಗ್ರಾಮ ಪಂಚಾಯಿತಿಗೆ ಸೇರಿಸಿ ಕತ್ತಿಗಿ
ಜೀನಳ್ಳಿ,ಮಾದೆನಳ್ಳಿ ಈ ಮೂರು ಊರುಗಳಿಂದ ಕತ್ತಿಗಿ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಆಯಿತು.
ಈಗ ಜೀನಳ್ಳಿ ಗ್ರಾಮವು ನ್ಯಾಮತಿ ತಾಲೂಕಿಗೆ ಸೇರಿರುವುದರಿಂದ ಜೀನಳ್ಳಿ ಗ್ರಾಮವನ್ನು ಸಮೀಪದಲ್ಲಿರುವ ಗ್ರಾಮ ಪಂಚಾಯಿತಿಗೆ ಸೇರಿಸಲು ಸರ್ಕಾರ ಗ್ರಾಮಸ್ಥರ ಅಭಿಪ್ರಾಯ ಕೇಳಲು ಗ್ರಾಮ ಲೆಕ್ಕಿಗರು ಬಂದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿತ್ತು.
ಗ್ರಾಮಸ್ಥರ ಅಭಿಪ್ರಾಯ ಜೀನಳ್ಳಿ ಗ್ರಾಮವನ್ನು ಪ್ರತ್ಯಕ ಗ್ರಾಮ ಪಂಚಾಯಿತಿ ಮಾಡಿ ಕೊಡಬೇಕೆಂದು ಬೇಡಿಕೆ ಇಟ್ಟಿತ್ತು,ಶಾಲಾ ಕಾಲೇಜು
ಪಶು ವೈದೈಕೀಯ ಆಸ್ಪತ್ರೆ ಹಾಲು ಒಕ್ಕೂಟ ಜೊತೆಗೆ ಬಿಲ್ಲಿಂಗ್ ಸೆಂಟರ್ ಮತ್ತು ವಿ ಎಸ್ ಎನ್ ಎಲ್ ಸೊಸೈಟಿಗಳು ಹೀಗೆ ಹಲವಾರು
ಮೂಲ ಸೌಕರ್ಯಗಳನ್ನು ಹೊಂದಿರುತ್ತದೆ.
ಎಂದು ಗ್ರಾಮಸ್ಥರು ತಾಲೂಕು ದಂಡಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಇವರಿಗೆ ಮನವಿಯನ್ನು ಈ ಹಿಂದೆ ಸಲ್ಲಿಸಿದ್ದರು. ಇದಾದ ನಂತರ ಜಿಲ್ಲಾಧಿಕಾರಿಗಳು ಗ್ರಾಮದ ಜನ ಸಂಖ್ಯೆ ಮತ್ತು ಗ್ರಾಮದ ಒಟ್ಟು ಭೂಮಿ ವಿಸ್ತೀರ್ಣ ಕಡಿಮೆ ಇರುವುದರಿಂದ ಗ್ರಾಮ ಪಂಚಾಯಿತಿ ಕೊಡಲು ಬರುವುದಿಲ್ಲ ಎಂದು ತಿಳಿಸಿದ್ದರು. ಮಾರ್ಚ 2ನೇ ತಾರೀಖು ಒಳಗಡೆ ಗ್ರಾಮಸ್ಥರ ಅಕ್ತೇಪಗೆ ಸಲ್ಲಿಸಲು ಜಿಲ್ಲಾಡಳಿತ ತಿಳಿಸಿತ್ತು. ಇದರ ಪ್ರಕಾರ ನಾವುಗಳು ಜೀನಹಳ್ಳಿ ಗ್ರಾಮವನ್ನು ಕೆಂಚಿಕೊಪ್ಪದ ಗ್ರಾಮ ಪಂಚಾಯಿತಿಗೆ ಸೇರಿಸಲು ನಮಗೆ
ಸಂರ್ಪೂಣ ಒಪ್ಪಿಗೆ ಇರುತ್ತದೆ ಎಂದು ಗ್ರಾಮದ ಸಂಘ ಸಂಸ್ಥೆಗಳು ಮತ್ತು ದಲಿತ ಸಂಘ ಸಂಸ್ಥೆಗಳು ಸಹ ಬೇರೆ ಬೇರೆ ರೀತಿಯಾಗಿ, ತಾಲೂಕು ದಂಡಾಧಿಕಾರಿಗಳು ಮತ್ತು ಜಿಲ್ಲಾ ದಂಡಧಿಕಾರಿಗಳು ಇವರುಗಳಿಗೆ ಅಕ್ಷೇಪಣೆ ತಕರಾರು ಅರ್ಜಿಯನ್ನು
ಸಲ್ಲಿಸಿರುತ್ತೇವೆ.

ಜೀನಹಳ್ಳಿ ಗ್ರಾಮಸ್ಥರಿಗೆ ಅನುಕೂಲವಾಗುವ ಗ್ರಾಮ ಪಂಚಾಯಿತಿ ಅಂದರೆ ಕೆಂಚಿಕೊಪ್ಪದ ಗ್ರಾಮ ಪಂಚಾಯಿತಿ ಎಂದು ತೀರ್ಮಾನ ಮಾಡಿ ಅರ್ಜಿ ಸಲ್ಲಿಸುರುತ್ತೆವೆ. ಇಲ್ಲಿ ಆರುಂಡಿ ಮತ್ತು ಕೆಂಚಿಕೊಪ್ಪ ಎಂದು ಪ್ರಶ್ನೆ ಬರುವುದಿಲ್ಲ, ಇಲ್ಲಿ ಜೀನಹಳ್ಳಿ ಗ್ರಾಮಸ್ಥರ
ಅನುಕೂಲ ಆಗುವುದು ಮುಖ್ಯವಾಗಿರುತ್ತದೆ.
ಜೀನಹಳ್ಳಿ ಗ್ರಾಮಸ್ಥರ ಅನುಕೂಲಕ್ಕಾಗಿ ತಾಲೂಕಿನ ಶಾಸಕರಾಗಲಿ ಹಾಗೂ ತಾಲೂಕಿನ ದಂಡಾಧಿಕಾರಿಗಳು ಮತ್ತು ಮಾನ್ಯ
ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಗಮನಕ್ಕೆ ತರುವುದರ ಮೂಲಕ ಈ ಬೇಡಿಕೆಯನ್ನು ಈಡೇರಿಸ ಬೇಕೆಂದು ಜೀನಹಳ್ಳಿ ಗ್ರಾಮಸ್ಥರ ಹಕ್ಕೂತ್ತಾಯವಾಗಿದೆ.

ಕೆಂಚಿಕೋಪ್ಪ ಗ್ರಾಮ ಪಂಚಾಯಿತಿಗೆ ಜೀನಹಳ್ಳಿ ಗ್ರಾಮವನ್ನು ಸೇರಿಸಲು ಕೆಂಚಿಕೊಪ್ಪ ಗ್ರಾಮಸ್ಥರುಗಳ ಒಪ್ಪಿಗೆ ಸಹ ಇದೇ ಎಂದು,
ದಿನಾಂಕ 6/03/2020ರಂದು ಸಹಿ ಸಂಗ್ರಹದ ಮೂಲಕ ನ್ಯಾಮತಿಯ ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ತನುಜಾ ಟಿ ಸೌವದತ್ತಿಯವರಿಗೆ ಮನವಿ ಪತ್ರವನ್ನು ಕೊಡಲಾಯಿತು ಎಂದು ಕೆಂಚಿಕೊಪ್ಪದ ಗ್ರಾಮಸ್ಥರು ತಿಳಿಸಿದರು.

Leave a Reply

Your email address will not be published. Required fields are marked *