ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡ ಜಾನುವಾರುಗಳ ನಿಗೂಢ
ಕಾಯಿಲೆಗಳ ಸಂಶೋಧನೆಯ ಭಾಗವಾಗಿ “ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ” ಕಾರ್ಯಕ್ರಮವನ್ನು ಪಶುಪಾಲನೆ
ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹೊನ್ನಾಳಿ, ದಾವಣಗೆರೆ ಜಿಲ್ಲೆ ಮತ್ತು ಹಾಲು ಉತ್ಪಾದಕರ ಸಹಕಾರ
ಸಂಘ, ಕುಂಬಳೂರು ಗ್ರಾಮ ಇವರ ಸಹಯೋಗದೊಂದಿಗೆ ಜಾನುವಾರುಗಳ ಸಮಗ್ರ ಆರೋಗ್ಯ ತಪಾಸಣೆ
ನಡೆಸಲಾಯಿತು. ಡಾ: ಎನ್.ಬಿ.ಶ್ರೀಧರ, ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರು, ಜಾನುವಾರುಗಳ
ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ ಇವರ ನೇತ್ರತ್ವದಲ್ಲಿ ವಿವಿಧ ಕಾರಣಗಳಿಂದ
ಅನುತ್ಪಾದಕವಾಗಿರುವ ಎಲ್ಲಾ ರಾಸುಗಳಿಗೆ ವಿಶೇಷ ಚಿಕಿತ್ಸೆಯನ್ನುನೀಡಲಾಯಿತು.
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್‍ರವರಾದ ಡಾ: ಪ್ರಕಾಶ್ ನಡೂರ್ ವಿಶೇಷ
ಒತ್ತಾಸೆಯ ಮೇರೆಗೆ ಈ ಕಾರ್ಯಕ್ರಮವನ್ನು ದಾವಣಗೆರೆಯ ಹೊನ್ನಾಳಿ ತಾಲೂಕಿನ ು ಮಿಶ್ರ ತಳಿಗಳು ಜಾಸ್ತಿ ಇರುವ
ಕುಂಬಳೂರು ಗ್ರಾಮದಲ್ಲಿ ನಡೆಸಲಾಗಿದ್ದು, ಜಿಲ್ಲೆಯ ಇತರ ಗ್ರಾಮಗಳಿಗೂ ಸಹ ಕಾಲ ಕ್ರಮೇಣ ವಿಸ್ತರಿಸಲಾಗುತ್ತಿದ್ದು,
ರೈತರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಡಾ: ಎನ್.ಬಿ.ಶ್ರೀಧರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೊನ್ನಾಳಿಯ ಶಾಸಕರಾದ ಶ್ರೀ ಎಂ.ಪಿ ರೇಣುಕಾಚಾರ್ಯ ಇವರು ರೈತರಿಗೆ
ಅವರ ರಾಸಿನ ಹಾಲಿನ ಬೆಲೆಯ ಶೆ 50 ರಷ್ಟನ್ನು ಪಶುವಿಗೇ ವಾಪಸ್ ನೀಡಿದಲ್ಲಿ ಅದು ಉತ್ತಮವಾಗಿ ಲಾಭ ತರುತ್ತದೆ
ಎಂದರು.


ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಾದ ಡಾ: ನವೀನ್ ಕುಮಾರ್, ಜಿ.ಟಿ.,
ಡಾ:ಚಂದ್ರಶೇಖರ್ ಹೊಸಮನಿ, ಡಾ: ಅಶೋಕ್ ಮತ್ತು ಡಾ: ಹರೀಶ್ ಇವರು ಇಲಾಖೆಯ ಸಿಬ್ಬಂದಿಗಳ ಜೊತೆ
ಈ ಕಾರ್ಯಕ್ರಮವನ್ನು ಆಯೋಜಿಸಿದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ: ಹರೀ± ಮತ್ತು ಕೊನೆ
ವರ್ಷದ ವಿದ್ಯಾರ್ಥಿಗಳು ಹಾಗೂ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಶ್ರಿ ಅಶ್ವಿನ್ ಇವರ ನೇತ್ರತ್ವದ ತಂಡದಲ್ಲಿ ಶ್ರಿ
ಪ್ರಕಾಶ್ ಮತ್ತು ಶ್ರಿ ಸಂದೇಶ್ ಇವರು ಚಿಕಿತ್ಸೆಯಲ್ಲಿ ಸಹಕರಿಸಿದರು. ವಿವಿಧ ಕಾರಣಗಳಿಂದ ಅನುತ್ಪಾದಕತೆಯತ್ತ
ಸಾಗಿದ 127 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು ಹಾಗೂ ರೈತರಿಗೆ ನಿಗದಿತ ಸಮಯದಲ್ಲಿ ತಜ್ಞರು ಸೂಚಿಸಿದ
ಚಿಕಿತ್ಸೆಯನ್ನು ಜಾನುವಾರುಗಳಿಗೆ ಮಾಡಿಸಿ ಅವುಗಳನ್ನು ಉತ್ಪಾದನೆಯತ್ತ ಸಾಗುವಂತೆ ಮಾಡಬೇಕೆಂದು ಮನವರಿಕೆ
ಮಾಡಿಕೊಡಲಾಯಿತು.

Leave a Reply

Your email address will not be published. Required fields are marked *