ದಾವಣಗೆರೆ ಜಿಲ್ಲೆ ಮಾ 15 ಹೊನ್ನಾಳಿ ತಾಲೂಕಿನ ಕೆ.ಪಿ.ಎಂ.ಇ.ವಿ ಹಾಗೂ ಪಿ.ಎಂ.ಎ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ನೊಂದಾಯಿತ ವೈದ್ಯರುಗಳಿಗೆ ಕರೋನಾ (ಕೋವಿಡ್ 19) ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹೊನ್ನಾಳಿ ತಾಲೂಕು ಆರೋಗ್ಯಧಿಕಾರಿಗಳಾದ ಕೆಂಚಪ್ಪ ಬಂತ್ತಿ ನೇತೃತ್ವದಲ್ಲಿ ಆರೋಗ್ಯಧಿಕಾರಿ ಸಭಾಂಗಣದಲ್ಲಿ ಈ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.
ನೋವೆಲ್ ಕರೋನ ವೈರಸ್ (2019-n cov)
“ಭಯಬೇಡ ಎಚ್ಚರವಿರಲಿ”
ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ ಈ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್ ನಲ್ಲಿ ಪತ್ತೆಯಾಗಿದೆ.
ಸೊಂಕಿತ ವ್ಯಕ್ತಿಯು ನೀನಾದಾಗ ಮತ್ತು ಕೆಮ್ಮಿದಾಗ, ಸೊಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಸೊಂಕಿತ ವ್ಯಕ್ತಿಯ ಹಸ್ತ ಲಾಘವ ಮತ್ತು ಮುಟ್ಟುವಾಗ ಸೊಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವಚ್ಚಗೊಳಿಸಿದ/ಸುರಕ್ಷಿತವಲ್ಲದ ಕೈಗಳಿಂದ ಕಣ್ಣು,ಮೂಗು,ಬಾಯಿಯನ್ನು ಮುಟ್ಟುವುದರಿಂದ ನಮಗೂ ಸಹ ಬರಹುದು.
“ಸಾರ್ವಜನಿಕರು ಅನುಸರಿಸಬೇಕಾಗಿರುವ ಮುಂಜಾಗ್ರತ ಕಗರಮಗಳು”
- ಸೊಂಕು ಪೀಡಿತರ ಸಂಪರ್ಕದಿಂದ ದೂರವಿರುವುದು
- ಶಂಕೀತ ರೋಗಿಯು ಮನೆಯಲ್ಲಿಯು ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು
- ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್/ಕೈವಸ್ತ್ರ ಉಪಿಯೋಗಿಸುವುದು
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
- ಉಸಿರಾಟ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು
- ಮಾಂಸ,ಮೊಟ್ಟೆ, ಇತ್ಯಾದಿಗಳನ್ನು ಚನ್ನಾಗಿ ಬೇಯಿಸಿ ಉಪಯೋಗಿಸುವುದು
- ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥಾವ ಸಾಕು ಪ್ರಾಣಿಗಳನ್ನು ಮುಟ್ಟಬೇಡಿ ಎಂದು ಹೇಳುತ್ತಾ ಟಿ.ಹೆಚ್. ಕೆಂಚಪ್ಪನವರು ಮಾತನಾಡಿ ಮಾಸ್ಕ್ ವನ್ನು ವೈದ್ಯರು,ಸಿಬ್ಬಂದಿವರ್ಗ ಹಾಗೂ ಸೋಂಕಿತ ರೋಗಿ ಮುಖ ಕವಚವನ್ನು ಹಾಕಿಕೊಳ್ಳಬೇಕು ಪ್ರತಿಯೋಂದು ಮನೆಯಲ್ಲಿ ಪ್ರತಿಯೊಬ್ಬರು ಸೋಪು ಹಚ್ಚಿಕೊಂಡು ಕೈ ತೊಳೆಯಬೇಕು
ಜನರು ಹೆದರುವುದು ಅವಶ್ಯಕತೆ ಇರುವುದಿಲ್ಲ ಎಂದು ಹೇಳುವುದರ ಜೊತೆಗೆ ಜನಗಳಿಗೆ ಸೊಂಕು ಪೀಡಿತ ವ್ಯಕ್ತಿಗಳ ಬಗ್ಗೆ ಸಂಶಯ ಕಂಡು ಬಂದರೆ 104 ಈ ನಂಬರ್ ಗೆ ಕರೆ ಮಾಡಿ.
ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ, ಹಾಗೂ ಆಶಾ ಕಾರ್ಯಕರ್ತರುಗಳಿಗೆ ಕೇಳಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿ;-
ಡಾ// ನಂದಾ ಉಪನಿರ್ದೆಶಕರು ಬೆಂಗಳೂರು
ಡಾ// ಮೀನಾಕ್ಷಿ ಜಿಲ್ಲಾ ಆರ್.ಸಿ ಹೆಚ್ ಅಧಿಕಾರಿಗಳು
ಡಾ// ಗಂಗಾಧರ ಕೆ.ಹೆಚ್ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಛೇರಿ
ಡಾ// ಡಿ.ಹೆಚ್.ಒ ಹೆಚ್.ಎಸ್ ರಾಘವೇಂದ್ರ ಸ್ವಾಮಿ
ಡಾ// ರಾಘವನ್ ಜಿ.ಡಿ ಜಿಲ್ಲಾ ಸರ್ವೇಕ್ಷಗಾಧಿಕಾರಿಗಳು
ಡಾ// ಟಿ.ಹೆಚ್.ಒ ಕೆಂಚಪ್ಪ ಖಾಸಗಿ ವೈದ್ಯಾಧಿಕಾರಿಗಳು
ಡಾ//ಹೆಚ್.ಪಿ ರಾಜ್‍ಕುಮಾರ್, ಡಾ// ಈಶ್ವರ್ ನಾಯ್ಕ್, ಡಾ// ಜಗದೀಶ್, ಮಾಜಿ ಶಾಸಕ ಡಾ// ಗಂಗಪ್ಪ ಮುಂತಾದವರು ಸಹ ಭಾಗಿಯಾಗಿದ್ದರು.