ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆರವರ ಸಭಾ ಸೂಚನೆ ದಿ-13-03-2020 ಇಂದು ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉಲ್ಲೇಖಿತ 1 ಮತ್ತು 2ರಲ್ಲಿನ ಆದೇಶದಂತೆ ಕರೋನ ವೈರಸ್ ಹರಡುವಿಕೆ ತಡೆಗಟ್ಟುವ ಸಂಬಂದ ಮುಂಜಾಗ್ರತವಾಗಿ ಹೆಚ್ಚಿನ ಜನರು ಸೇರಿದಂತೆ ನೋಡಿಕೊಳ್ಳಲು ಸೂಚಿಸಿರುವ
ಹಿನ್ನಲೆಯಲ್ಲಿ ಇಂದಿನಿಂದ 15/03/2020 ಸದರಿ ವೈರಸ್ ಪ್ರಮಾಣ ಕಡಿಮೆ ಯಾಗುವರಿಗೂ ತಮ್ಮ ತಮ್ಮ ಮಾಲೀಕತ್ವದಲ್ಲಿರುವ ಸಿನಿಮಾ ಮಂದಿರ/ಕಲ್ಯಾಣ ಮಂದಿರ/ಪಬ್/ರಸಮಂಜರಿ/ನೈಟ್ ಕ್ಲಬ್/ ಸಂಗೀತ ಶಾಲೆ/ಟ್ಯೂಷನ್/ಈಜು ಕೊಳ/ಜೀಮ್/ಗರಡಿ ಮನೆ/ರಂಗಮಂದಿರಗಳನ್ನು ಹಾಗೂ
ಪುಟ್ ಬಾತ್ ಮೇಲೆ ಇಟ್ಟಿಕೊಂಡಿರುವ ಆಹಾರ ಪದಾರ್ಥಗಳನ್ನು ತಯಾರಿ ಮಾಡುವ ಅಂಗಡಿ ಮತ್ತು ತಿಂಡಿ ತಿನಿಸುಗಳ
ಅಂಗಡಿಗಳನ್ನು ಕೂಡಲೇ ಈ ಕ್ಷಣದಿಂದ ಬಂದು ಮಾಡಲು, ಸೂಚಿಸಲಾಯಿತು. ತಪ್ಪಿದಲ್ಲಿ ನಿಮ್ಮಗಳ ಮೇಲೆ ಭಾರತೀಯ ದಂಡ ಸಂಹಿತೆ ನಿಯಮದ ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುವುದು. ಎಂದು
ಹೊನ್ನಾಳಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಶ್ರೀ ಹೆಚ್.ಎಂ ವೀರಭದ್ರಯ್ಯನವರು ತಿಳಿಸುತ್ತ,ಮುಂಜಾಗ್ರತ ಕ್ರಮವಾಗಿ ಹೊನ್ನಾಳಿ ಪಟ್ಟಣದ ಪುಟ್ಬಾತ್ನಲ್ಲಿರುವ
ಅಂಗಡಿಗಳನ್ನು ಪೋಲಿಸ್ ಇಲಾಖೆ, ಮತ್ತು ಪೌರ ಕಾರ್ಮಿಕರ` ಸಹಕಾರದೊಂದಿಗೆ ತೆರವುಗೊಳಿಸಿದರು.