ನಿಮ್ಮ ನಿಮ್ಮ ಹೊಟೆಲ್ ಗಳಿಗೆ ಉಪಹಾರ ಮತ್ತು ಊಟಕ್ಕೆ ಜನಗಳು ಬರುತ್ತಾರೆ,ನೀವುಗಳು ಆರೋಗ್ಯದ ಬಗ್ಗೆ ಗಮನದಲ್ಲಿ ಇರಿಸಿಕೊಂಡು
ಅವರಿಗೆ ಕುಡಿಯಲಿಕ್ಕೆ ಕಾದು ಆರಿಸಿದ ನೀರನ್ನು ಹಾಗೂ ಲೋಟ ತಟ್ಟೆ ಮತ್ತು ಪಾತ್ರೆಗಳನ್ನು ಬಿಸಿ ನೀರಿನಲ್ಲಿ ತೊಳೆದು ಗ್ರಾಹಕರಿಗೆ ತಿಂಡಿ
ತಿನಿಸುಗಳನ್ನೂ ನೀಡ ಬೇಕೆಂದು ಹಾಗೂ ಸ್ವಚ್ಚೆತೆ ಅದರ ಜೊತೆಗೆ ಪಾಸ್ಟಿಕ್ ಬಳೆಕೆಯನ್ನು ನಿಷೇದಿಸುವಂತೆ ಸೂಚಿಸಿದರು.
ಇಂದು ಬಸ್ ಟ್ಯಾಂಡ್‍ಡಿನಲ್ಲಿ ಇದ್ದ ಜಾನಿ ಹೋಟೆಲ್ ತೆರೆದಿದ್ದು ಆ ಅಂಗಡಿಯನ್ನು ಸಹ ಮುಚ್ಚಿಸಿದರು. ಇಂದು ಬುದುವಾರ ಹೊನ್ನಾಳಿಯಲ್ಲಿ ಸಂತೆ ನಡೆಯಬೇಕಾಗಿತ್ತು. ಕರೋನ ವೈರಸ್ ಬಂದಿರುವ ಕಾರಣ ತರಕಾರಿ ಸಂತೆ, ಜಾನುವಾರ ಸಂತೆ, ಕುರಿ ಸಂತೆ, ಇಂದು ಯಾವುದು ಸಹ ನಡೆಯಲಿಲ್ಲ. ಇಂದು ಹೊನ್ನಾಳಿ ನಗರ ಮತ್ತು ಸುತ್ತ ಮುತ್ತಲಿನ ಗ್ರಾಮದ ಜನರುಗಳು ನಮ್ಮ ಕರೆಗೆ ಒಗೊಟ್ಟು ಸಂತೆಗೆ ಅಂಗಡಿಯ
ಮಾಲೀಕರು ಮತ್ತು ಗ್ರಾಹಕರು ಸ್ಪಂದಿಸಿದಕ್ಕೆ ಹೊನ್ನಾಳಿಯ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಹೆಚ್. ಎಂ ವೀರಭದ್ರಯ್ಯನವರು ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿರುತ್ತಾರೆ. ನಮ್ಮಗಳ ಜೊತೆಗೆ ನಾಗೇಶ್, ಮತ್ತು ಪಟ್ಟಣ ಪಂಚಾಯಿತಿಯ ಎಲ್ಲಾ ಆಟಳಿತ ವರ್ಗ ಹಾಗೂ ಪೌರ ಕಾರ್ಮಿಕರ ಸಹಾಕಾರದೊಂದಿಗೆ ಈ ಕಾರ್ಯಾಚಾರಣೆಯನ್ನು ನಡೆಸಲಿಕ್ಕೆ ಸಾಧ್ಯ ಎಂದು ಮುಖ್ಯಾಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯನವರು ತಿಳಿಸಿದರು.