ದಿನಾಂಕ;-23-03-2020ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ರಾಜ್ಯ ಸರ್ಕಾರದ ಸಚಿವರುಗಳಾದ ಬಸವರಾಜ್ ಬೊಮ್ಮಾಯಿಯವರ ಗೊಂದಲದ ಹೇಳಿಕೆಯು ವಿದ್ಯಾರ್ಥಿಗಳು ಮತ್ತು ಪೋಷಕರುಗಳಿಗೆ ಬಯವನ್ನು ಸೃಷ್ಟಿ ಮಾಡಿದ್ದರು.
ನಂತರ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಕೆ ಎಸ್ ಆರ್ ಟಿ ಸಿ ಎಂ ಡಿಯವರ ಮತ್ತು ಶಿಕ್ಷಣ ಕಾರ್ಯದರ್ಶಿಗಳ ಜೊತೆ ಮಾತನಾಡಿ ತಿಳಿಸುತ್ತೇನೆ ಎಂದು ಹೇಳುತ್ತಾರೆ. ಇದರ ಅರ್ಥ ರಾಜ್ಯ ಸಕಾರದಲ್ಲಿ ಇರುವ ಸಚಿವರುಗಳ ಮಧ್ಯೆ ಹೊಂದಾಣಿಕೆಯ ಕೊರತೆ ಎದ್ದು ಕಾಣಿಸುತ್ತದೆ.
ನಂತರ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯುರಪ್ಪನವರು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರ ಜೊತೆ ಚರ್ಚಿಸಿ,
ದ್ವಿತಿಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಯನ್ನು ಮಾರ್ಚ 31 ನಂತರ ನಡೆಸಲಾಗುವುದು ಎಂದು ತಿಳಿಸುತ್ತಾರೆ.
ಇದಾದನಂತರ ಮಾನ್ಯ ಸುರೇಶ್ ಕುಮಾರ್ ರವರು ಏಪ್ರಿಲ್ 01ರ ನಂತರ ದಿನಾಂಕ ಪ್ರಕಟಣೆ ಮಾಡುವುದಾಗಿ ಎಂದು ತಿಳಿಸುತ್ತಾ ಇದು ರಾಜ್ಯ ಸರ್ಕಾರದ ಆದೇಶ ಎಂದು ಹೇಳಿದರು.