ದಾವಣಗೆರೆ: ಮಾರಕ ಕೊರೋನಾ ವೈರಸ್ ವಿರುದ್ದ
ಇಂದು ದೇಶಾದ್ಯಂತ ಜನತಾ ಕಪ್ರ್ಯೂಗೆ ವ್ಯಾಪಕ ಬೆಂಬಲ ನೀಡಿದ
ದಾವಣಗೆರೆ ಮಹಾಜನತೆಗೆ ತುಂಬು ಹೃದಯದ
ಅಭಿನಂದನೆಗಳನ್ನು ಸಲ್ಲಿಸುತ್ತಾ ಕಪ್ರ್ಯೂ ಇದ್ದರೂ ಸಹ
ದಾವಣಗೆರೆ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ತಮ್ಮ
ಎಂದಿನ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೋಳ್ಳುವ ಮೂಲಕ
ದಾವಣಗೆರೆ ಜನತೆಯ ಆರೋಗ್ಯ ಭಾಗ್ಯಕ್ಕೆ ತಮ್ಮದೇ ಆದ
ಸೇವೆ ಸಲ್ಲಿಸಿದ ಪೌರಕಾರ್ಮಿಕರು ಅಭಿನಂದನಾರ್ಹರು ಎಂದು
ಮಹಾನಗರ ಪಾಲಿಕೆಯ ವಿಪಕ್ಷ ನಾಯಕರಾದ ಎ.ನಾಗರಾಜ್
ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಸೇವೆ
ಮತ್ತು ಕರ್ತವ್ಯ ಪ್ರಜ್ಞೆಯನ್ನು
ಗೌರವಿಸಬೇಕಾಗಿರುವುದು ಪಾಲಿಕೆ ಆಡಳಿತದ ಜವಾಬ್ಬಾರಿ. ಬರುವ
ಯುಗಾದಿ ಹಬ್ಬಕ್ಕೆ ಸ್ವಚ್ಚ ಭಾರತ್ ಅಭಿಯಾನ ಅಥವಾ
ಶೇ.24.10ರ ಅನುದಾನದಲ್ಲಿ 5 ಸಾವಿರ ರೂಗಳನ್ನು ಬೋನಸ್
ರೂಪದಲ್ಲಿ ನೀಡುವ ಮೂಲಕ ಅಭಿನಂದಿಸಬೇಕಾಗಿ
ಒತ್ತಾಯಿಸುತ್ತೇನೆ.
ಸ್ಯಾನಿಟೈಸರ್ ಅಳವಡಿಸಿ: ದಾವಣಗೆರೆ ಮಹಾನಗರ ಪಾಲಿಕೆ
ಕಛೇರಿಗೆ ಪ್ರತಿದಿನ ಸಾವಿರಾರು ಸಾರ್ವಜನಿಕರು
ಆಗಮಿಸುತ್ತಿದ್ದು, ಪಾಲಿಕೆ ಅಧಿಕಾರಿ, ನೌಕರ ಮತ್ತು ಸಿಬ್ಬಂದಿ
ವರ್ಗದವರ ಹಿತದೃಷ್ಟಿಯಿಂದ ಪ್ರತಿ ಕೊಠಡಿಗಳಲ್ಲಿ
ಸ್ಯಾನಿಟೈಸರ್ ಅಳವಡಿಸಬೇಕು ಹಾಗೂ ಪಾಲಿಕೆ ಅಧಿಕಾರಿ, ನೌಕರ
ಮತ್ತು ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಗಳನ್ನು
ನೀಡಬೇಕೆಂದು ಆಗ್ರಹಿಸುತ್ತೇನೆ.
ಕೊರೋನಾ ವೈರಸ್ ಭೀತಿ ನಡುವೆಯೂ ಮಾರ್ಚ್ ಕೊನೆ
ಆಗಿರುವುದರಿಂದ ಮಹಾನಗರ ಪಾಲಿಕೆ ಕಛೇರಿಯಲ್ಲಿ ಸ್ಥಾಪಿಸಿರುವ

ಕಂದಾಯ ಇಲಾಖೆಗೆ ಕಂದಾಯ ಸಂದಾಯಕ್ಕೆ ಸಾರ್ವಜನಿಕರು
ಆಗಮಿಸುತ್ತಿದ್ದು, ಅವರಿಗೆ ಅನುಕೂಲವಾಗುವಂತೆ ಹೆಚ್ಚಿನ
ಕೌಂಟರ್ ಗಳನ್ನು ಆರಂಭಿಸಬೇಕು ಹಾಗೂ ಈಗಾಗಲೇ
ಸಾರ್ವಜನಿಕರ ಸ್ವತ್ತುಗಳು ಸಂಪೂರ್ಣ
ಗಣಕೀಕೃತವಾಗಿರುವುದರಿಂದ ಆನ್‍ಲೈನ್ ನಲ್ಲಿ ಕಂದಾಯ
ಪಾವತಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು
ಒತ್ತಾಯಿಸುತ್ತೇನೆ.
ಇನ್ನು ಟ್ರೇಡ್ ಲೈಸೆನ್ಸ್ ಮಾಡಿಸದ ಹಾಗೂ
ನವೀಕರಣಗೊಳಿಸದ ಅಂಗಡಿ-ಮುಗ್ಗಟ್ಟುಗಳಿಗೆ ಬೀಗ ಹಾಕುವ
ಮೇಯರ್ / ಆಯುಕ್ತರ ಕ್ರಮ ಖಂಡನಾರ್ಹವಾದುದು.
ಅದರ ಬದಲು ಆಂದೋಲನದ ರೂಪದಲ್ಲಿ ಸ್ಥಳದಲ್ಲೇ ಹಣ
ಪಡೆದು ರಸೀದಿ ನೀಡಬೇಕು ನಂತರ ಅವರ ಅಂಗಡಿ ಬಾಗಿಲಿಗೆ
ಟ್ರೇಡ್ ಲೈಸೆನ್ಸ್ ನೀಡುವುದರಿಂದ ಏಜೆಂಟರ ಹಾವಳಿಗೂ ಕಡಿವಾಣ
ಹಾಕಬಹುದು ಮತ್ತು ಸಾರ್ವಜನಿಕರು ಪಾಲಿಕೆಗೆ
ಅಲೆದಾಡುವುದನ್ನು ತಪ್ಪಿಸಬಹುದು ಎಂದು ಮಹಾನಗರ
ಪಾಲಿಕೆಯ ವಿಪಕ್ಷ ನಾಯಕರಾದ ಎ.ನಾಗರಾಜ್ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *