ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 100 “ಎ”ವರ್ಗದ ಆಯ್ದ ದೇವಸ್ಥಾನಗಳಲ್ಲಿ 2019-2020ನೇ ಸಾಲಿನಿಂದ
ಜನಸಾಮಾನ್ಯರ ಅನುಕೂಲಕ್ಕಾಗಿ'” ಸಪ್ತಪದಿ” ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ಕಾರದ ಈ ಸಾಮೂಹಿಕ
ಉಚಿತ ವಿವಾವ ಕಾರ್ಯಕ್ರದಲ್ಲಿ ಪ್ರತಿ ನವ ಜೋಡಿಗೆ ಅಗತ್ಯತೆ ಅನುಗುನವಾಗಿ ವರನಿಗೆ ಹೂವಿನ ಹಾರ ಪಂಚೆ ಶರ್ಟ ಮತ್ತು ಶಲ್ಯಕ್ಕಗಿ
5000ರೂಗಳನ್ನು ಹಾಗೂ ವಧುವಿಗೆ ಹೂವಿನ ಹಾರ ,ಧಾರೆ ಸೀರೆ,ಮತ್ತು ರವಿಕೆ ಕಂಕಣಕ್ಕಾಗಿ 10.000ರೂಗಳನ್ನು ಮತ್ತು ವಧುವಿಗೆ
ಚಿನದ ತಾಳಿ,ಎರಡು ಚಿನ್ನದ ಗುಂಡು (ಅಂದಾಜು -8 ಗ್ರಾಂ ತೂಕ,ಅಂದಾಜು ರೂ 40.000ಗಳನ್ನು) ಒಟ್ಟು ರೂ 55.000ಗಳನು ಉಚಿತ
ವಾಗಿ ಸಂಬಂದಿಸಿದ ದೇವಾಲಯದಿಂದ ಭರಿಸಲಾಗುವುದು.ಸಾಮೂಹಿಕ ವಿವಾಹಕ್ಕೆ ಆಗಮಿಸುವ ವಧು-ವರರ ಮತ್ತು ಅವರ ಬಂದುಗಳಿಗೆ
ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರೆ ಅವಶ್ಯಕ ವ್ಯವಸ್ಥೆಗಳನ್ನು ಮಾಡಲು ತಗಲುವ ವೆಚ್ಚಗಳನ್ನು ಸಂಬದಿಸಿದ ದೇವಾಲಯದಿಂದ ಭರಿಸಲಾಗುವುದು ಎಂದು ಹೊನ್ನಾಳಿ ತಾಲೂಕಿನ ತಹಿಸಿಲ್ದಾರ್ ರಾದ ತುಷಾರ್ ಬಿ ಹೊಸೊರಾ ರವರು ತಿಳಿಸಿದರು.
ವಧು-ವರರ ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ 24/4/2020
ವಿವಾಹ ನಡೆಯುವ ದಿನಾಂಕ 24/5/200

Leave a Reply

Your email address will not be published. Required fields are marked *