ಕರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಅಬಕಾರಿ ಆಯುಕ್ತರ ನಿರ್ದೇಶನದ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾರ್ಚ್ 14 ರಿಂದ 21 ರ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕ್ಲಬ್ಗಳು(ಸಿಎಲ್-4 ಸನ್ನದುಗಳು) ಹಾಗೂ ಸ್ವತಂತ್ರ ಆರ್.ವಿ.ಬಿ ಸನ್ನದುಗಳು(ಪಬ್ಗಳು) ಮುಚ್ಚಲು ಆದೇಶಿಸಲಾಗಿತ್ತು ಹಾಗೂ ಸಿಎಲ್-5(ಸಾಂದರ್ಭಿಕ ಸನ್ನದು)ಗಳನ್ನು ಮುಂದಿನ ಸೂಚನೆವರೆಗೆ ಮಂಜೂರು ಮಾಡದಂತೆ ಸೂಚಿಸಲಾಗಿತ್ತು.
ಕೊರೊನಾ ವೈರಸ್ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದಿರುವುದರಿಂದ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವೈರಸ್ ಸೋಂಕು ವ್ಯಾಪಕವಾಗಿ ಹರಡಬಹುದಾದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾರ್ಚ್ 21 ರ ಸಂಜೆ 4.00 ಗಂಟೆಯಿಂದ ಮಾರ್ಚ್ 31 ರ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿರುವ ಸಿಎಲ್-2 ಹಾಗೂ ಸಿಎಲ್-11(ಸಿ) (MSIL Outlets) ಸನ್ನದುಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸಿಎಲ್-4, ಸಿಎಲ್-6(ಎ), ಸಿಎಲ್-7, ಸಿಎಲ್-7(ಸಿ), ಸಿಎಲ್-8, ಸಿಎಲ್-8(ಎ), ಸಿಎಲ್-8(ಬಿ), ಸಿಎಲ್-9, ಸಿಎಲ್-14, ಸಿಎಲ್-15, ಸಿಎಲ್-17, ಸಿಎಲ್-18, ವೈನ್ ಟಾವರಿನ್, ಪಬ್ಗಳು ಹಾಗೂ ಮೈಕ್ರೋಬ್ರೀವರಿ ಮದ್ಯ ಮಾರಾಟ ಸನ್ನದುಗಳನ್ನು ಮುಚ್ಚುವುದು ಕಡ್ಡಾಯವಾಗಿದೆ.
ವಹಿವಾಟು ನಡೆಸುವ ಸಿಎಲ್-2 ಮತ್ತು ಸಿಎಲ್-11(ಸಿ) (MSIL Outlets) ಸನ್ನದುಗಳ ವ್ಯವಹಾರ ಸಮಯವನ್ನು ಕಡ್ಡಾಯವಾಗಿ ಪಾಲಿಸಿ, ಜನಜಂಗುಳಿಯಾಗದಂತೆ ಕ್ರಮವಹಿಸುವುದು.
ಸದರಿ ಅವಧಿಯಲ್ಲಿ ಯಾವುದೇ ಸಿಎಲ್-5(Occasional Licence) ಸನ್ನದನ್ನು ಮಂಜೂರು ಮಾಡುವುದು ನಿಷೇಧಿಸಲಾಗಿದ್ದು, ಯಾವುದಾದರೂ ಲೋಪ ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ