ಕೊರೋನಾ ಹಿನ್ನಲೆಯಲ್ಲಿ ರಾಜ್ಯಾಧ್ಯಾಂತ ಜನತೆಗೆ 144 ಸೆಕ್ಷನ್ ಜಾರಿ ಮಾಡಿ ಯಾರು ಕೂಡ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೊಗದಂತೆ ಮನೆಯಲ್ಲೆ ಪ್ರತಿಯೊಬ್ಬರು ಇರಬೇಕೆಂದು ಸರ್ಕಾರ ಆದೇಶ ಮಾಡಿತ್ತು. ಜನರು ಬೆಳಗ್ಗೆ ಬೆಂಗಳೂರಿಂದ ತಮ್ಮ ಊರುಗಳಿಗೆ ಹೊರಟ್ಟು ಟೊಲ್ ಗೇಟ್ ನಲ್ಲಿ ಪೋಲಿಸರು ಹೊಗದಂತೆ
ತಡೆದಿದ್ದರು. ಇದನ್ನು ಟಿ.ವಿ ಮಾಧ್ಯಮದವರು, ಮತ್ತು ಪತ್ರಿಕಾ ಮಾಧ್ಯಮದವರು ಪ್ರಸಾರ ಮಾಡಿರು
ಹಿನ್ನಲೆಯಲ್ಲಿ, ಮನಗೊಂಡು ರಾಜ್ಯದ ಮುಖ್ಯಮಂತ್ರಿಗಳು ಇಂದು ರಾತ್ರಿ ಸಮಯದ ವರೆಗೆ ಅವಕಾಶ ಮಾಡಿಕೊಟ್ಟಿರುತ್ತಾರೆ. ನಾಳೆಯಿಂದ ಯಾವುದೇ ಕಾರಣಕ್ಕು ಹೊರಗೆ ಓಡಾಡಲು ಅವಕಾಶವಿರುವುದಿಲ್ಲ ಮತ್ತು ತಮ್ಮ ಮನೆಯಲ್ಲೇ ಇದ್ದು ಸರಳವಾಗಿ ಯುಗಾದಿ ಹಬ್ಬವನ್ನು ಆಚರಿಸಿ ಹೊರಗೆಬರದಂತೆ ಕಠೀಣವಾದ
ಸಂದೇಶವನ್ನು ಆದೇಶಿಸಿದ್ದಾರೆ.