ದಾವಣಗೆರೆ ಮಾ.25
ಕೊರೊನಾ ಸೋಂಕು ತಡೆ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್‍ಡೌನ್ ಆಗಿದೆ. ಆದರೆ ಅಗತ್ಯ ಸೇವೆಗಳ ಪೂರೈಕೆ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಅಗತ್ಯವಿರುವ ಇಲಾಖೆ/ಸಂಸ್ಥೆಗಳು/ಸೇವೆಗಳ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಕಚೇರಿಯಿಂದ ಪಾಸ್‍ಗಳನ್ನು ವಿತರಿಸಲಾಗುತ್ತಿದೆ.
ಅಗತ್ಯ ಸೇವೆಗಳಾದ ಖಾಸಗಿ ಸೆಕ್ಯೂರಿಟಿ ಗಾಡ್ರ್ಸ್, ಪೆಟ್ರೋಲ್, ಗ್ಯಾಸ್, ಗ್ಯಾಸ್ ಸಿಲೆಂಡರ್ ವಿತರಕರು, ಬ್ಯಾಂಕ್, ಎ.ಟಿಎಂ, ಇನ್‍ಶ್ಯೂರೆನ್ಸ್ ಕಂಪನಿಯ ಸಿಬ್ಬಂದಿಗಳು, ಆನ್‍ಲೈನ್ ಫುಡ್ ಡೆಲಿವರಿ ಹಾಗೂ ಆನ್‍ಲೈನ್ ಮೂಲಕ ಔಷಧಿಗಳನ್ನು ಪೂರೈಸುವ ಸಿಬ್ಬಂದಿಗಳು, ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್‍ನಂತಹ ಇ-ವಾಣಿಜ್ಯಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಬಂದಿಗಳು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದವರು, ದಿನಸಿ ಅಂಗಡಿಗಳು, ಡೈರಿ, ಮಾಂಸ ಮತ್ತು ಮೀನು ಮಾರಾಟಗಾರರು, ಆಸ್ಪತ್ರೆಯಲ್ಲಿರುವ ಸಿಬ್ಬಂದಿಗಳು, ಐಟಿ ಕಂಪನಿ ಉದ್ಯೋಗಿಗಳು, ಬೆಸ್ಕಾಂ ಸಿಬ್ಬಂದಿಗಳು, ಬಂಡವಾಳ ಮತ್ತು ಸಾಲ ಮಾರುಕಟ್ಟೆಗಳು, ಕೋಲ್ಡ್ ಸ್ಟೋರೆಜ್ ಹಾಗೂ ವೇರ್ ಹೌಸಿಂಗ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ, ಅಗತ್ಯ ಸರಕುಗಳನ್ನು ಪೂರೈಸುವ ಸಿಬ್ಬಂದಿಗಳು, ಹೋಟೆಲ್ ಮತ್ತು ಲಾಡ್ಜ್‍ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಹಾಗೂ ಅಗತ್ಯ ಸರಕು ಸಾಮಗ್ರಿಗಳ ಸಾರಿಗೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಪಾಸ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.