ನ್ಯಾಮತಿ ತಾಲೂಕು ತಹಶೀಲ್ದಾರ್ ರಾದ ಶ್ರೀಮತಿ ಟಿ
ತನುಜಾರವರ ನೇತೃತ್ವದಲ್ಲಿ ಇಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಿರಣಿ ಅಂಗಡಿ,ಮೆಡಿಕಲ್ ಶಾಪ್, ಹಾಲಿನ ಡೈರಿಗಳು ಮತ್ತು ಇನ್ನು ಇತರೆ ಅಂಗಡಿಗಳ ಮಾಲೀಕರು ಮತ್ತು ಜನರುಗಳ ಮಧ್ಯೆ ಅಂತರವನ್ನು ಕಾಯ್ದುಕೊಳ್ಳಲು ಒಂದು ಮೀಟರ್‍ಗೆ ಒಂದರಂತೆ ಅಂತರಕ್ಕೆ ಬಾಕ್ಸ್ ಗಳನ್ನು ನಿಗದಿ ಮಾಡಿ. ಆ ಬಾಕ್ಸಿನ ವ್ಯಾಪ್ತಿಯಲ್ಲಿ ನಿಂತು ವ್ಯವಹಾರವನ್ನು ಮಾಡುವಂತೆ ಪರಿಮಿತಿಯನ್ನು ಹಾಕಿಸಿದರು. ತಾಲೂಕು ಆಡಳಿತ, ಪೋಲಿಸ್ ಇಲಾಖೆ, ಮತ್ತು ಗ್ರಾಮ ಪಂಚಾಯಿತಿಯ ಸಹಾಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು. ನಂತರ ಪ್ರತಿಯೊಬ್ಬ ಜನರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬರಬೇಕೆಂದು ಜಾಗೃತಿಯನ್ನು ಮೂಡಿಸಿದ್ದರು.
ಇವರುಗಳ ಉಪಸ್ಥಿಯಲ್ಲಿ;- ನ್ಯಾಮತಿ ತಾಲೂಕಿನ ತಹಶೀಲ್ದಾರ್ ರಾದ ಶ್ರೀಮತಿ ಟಿ ತನುಜಾರವರು,ಡಿ.ಟಿ ನಾಗರಾಜ್ ರವರು,ಪಿ.ಎಸ್.ಐ ಹನುಮಂತಪ್ಪ ಸಿರನಹಳ್ಳಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷೆರಾದ ರೇಣುಕ ಪಾಂಡುರಂಗಪ್ಪ, ರವಿ ಸಿ.ಕೆ, ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.