ದಾವಣಗೆರೆ ಜಿಲ್ಲೆ;- ಮ27 ಹೊನ್ನಾಳಿ ತಾಲೂಕು ತಿಮ್ಲಾಪುರ ತಾಂಡ ಎಂಬ
ಕುಗ್ರಾಮದಲ್ಲಿ 980
ಜನಸಂಖ್ಯೆಯನ್ನು ಹೊಂದಿದ್ದು ಈ ಗ್ರಾಮದಲ್ಲಿ ಇಂದು ದಿನಾಂಕ 27/03/2020 ಶುಕ್ರವಾರದಂದು ಕೊರೋನಾ ವೈರಸ್ ಕೋವಿಡ್ 19 ಮಹಾಮಾರಿ ರೋಗವನ್ನು ತಡೆಯಲು ಉದ್ದೇಶಿಸಿ ಸೇವಾಲಾಲ್ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಪ್ರಭುದೇವನಾಯ್ಕ ಮತ್ತು ಗೋರ್ ಬಾಯಿ ಸೇವಾ ಸಮಿತಿಯ ಸದಸ್ಯರುಗಳು , ಊರಿನ ಗ್ರಾಮ ಪಂಚಾಯಿತಿಯ ಸದಸ್ಯರುಗಳ ನೇತೃತ್ವದಲ್ಲಿ ಇಂದು ಈ ಗ್ರಾಮದಲ್ಲಿ ಪ್ರತಿಯೊಂದು ಮನೆ ಮನೆಗೆ ತೆರಳಿ ಮುಖ
ಕವಚವನ್ನು ಪ್ರತಿಯೊಂದು ಮನೆಯ ಕುಟುಂಬದಲ್ಲಿರುವ ಎಲ್ಲಾ ಸದಸ್ಯರುಗಳಿಗೆ ವಿತರಣೆ ಮಾಡುವುದರ ಮೂಲಕ ಜಾಗೃತಿಯನ್ನು ಮೂಡಿಸಿದರು.ದಾವಣಗೆರೆ ಜಿಲ್ಲೆಯಲ್ಲಿ ಈ ಗ್ರಾಮವು ಪ್ರಾಥಮವಾಗಿ ಇಂತಹ ಕಾರ್ಯಕ್ರಮವನ್ನು
ಹಮ್ಮಿಕೊಂಡಿರುವುದು,ಶ್ಲಾಗನೀಯ.


ಹೊನ್ನಾಳಿ ತಾಲೂಕಿನಲ್ಲಿರುವ ತಿಮ್ಲಾಪುರ ತಾಂಡವು ಜಿಲ್ಲೆಗೆ ಮಾದರಿಯಾದ ಗ್ರಾಮ ಎಂದು ಹೇಳಲು ಸಂತಸದ ವಿಷಯ. ಈ ರೀತಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಸ್ವಯಂ ಪ್ರೇರಿತವಾಗಿ ತಮ್ಮ ತಮ್ಮ ಹಳ್ಳಿಗಳಲ್ಲಿ ಪಕ್ಷಾತೀತವಾಗಿ ಇಂತಹ ಕಾರ್ಯಕ್ರಮವನ್ನು ಮಾಡಿದರೆ, ಕೊರೋನಾ ವೈರಸ್ ನ್ನು ತಡೆಗಟ್ಟಬಹುದು.
ಇವರುಗಳ ಉಪಸ್ಥಿತಿಯಲ್ಲಿ;-ತಿಮ್ಲಾಪುರ ಸೇವಲಾಲ್ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಪ್ರಭುದೇವನಾಯ್ಕ,ಗ್ರಾಮದ ಹಟ್ಟಿ ನಾಯ್ಕರು, ಜಯನಾಯ್ಕ್, ಗ್ರಾ.ಪ ಸದಸ್ಯರು ಲಕ್ಷಣ ನಾಯ್ಕ, ಲಲಿತಾಬಾಯಿ, ಗ್ರಾಮದ ಮುಖಂಡರು ಪೋಮ್ಯ ನಾಯ್ಕ್, ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಮಲೇಶ್ ನಾಯ್ಕ್, ಶಿಕ್ಷಕರಾದ ಸುರೇಶ್ ನಾಯ್ಕ್, ಕಾರ್ ಬಾರಿ ಗಂಗಾ ನಾಯ್ಕ್, ಮತ್ತು ಆಶಾ ಕಾರ್ಯಕರ್ತೆ ಆಶಾಬಾಯಿ, ಅಂಗನವಾಡಿ ಕಾರ್ಯಕರ್ತೆ ಅನುಸೂಯಬಾಯಿ ಹಾಗೂ ಗ್ರಾಮದ ಎಲ್ಲಾ ಯುವಕರು ಪಾಲಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *