ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕಿನ ಮಾ 27 ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಅಗ್ನಿಶಾಮಕದಳ ಸಿಬ್ಬಂದಿಗಳ ಸಹಕಾರದೊಂದಿಗೆ ಅಗ್ನಿ ನಂದಿಸುವ ಯಂತ್ರ ಟ್ಯಾಂಕರ್ ನಲ್ಲಿ ಬ್ಲಿಚಿಂಗ್ ಪೌಡರ್ ಮತ್ತು ಕ್ಲೊರಾಡ್ ದ್ರಾವಣವನ್ನು ನೀರಿನ ಜೊತೆಗೆ ಮಿಶ್ರಣ ಮಾಡಿ ಖಾಸಗಿ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಸಂಪಿಗೆ ರಸ್ತೆ, ಮತ್ತು ಸರ್ವಜ್ಞ ರಸ್ತೆ,ದುರ್ಗಿಗುಡಿ ಭಾಗದಲ್ಲಿ
ದ್ರಾವಣವನ್ನು ಸಿಂಪಡಿಸಲಾಯಿತು. ಹೊನ್ನಾಳಿ ತಾಲೂಕ್ ತಹಶೀಲ್ದಾರ್ ಆದೇಶದ ಅನ್ವಯ, ಹೊನ್ನಾಳಿ ಪಟ್ಟಣ ಪಂಚಾಯಿತಿ
ಮುಖ್ಯಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯನವರು ನೇತೃತ್ವದಲ್ಲಿ ಮತ್ತು ಆರೋಗ್ಯ ಅಧಿಕಾರಿಯಾದ ನಾಗೇಶ್, ಹಾಗೂ
ಪೌರಕಾರ್ಮಿಕರ ಸಹಕಾರದೊಂದಿಗೆ ಸಿಂಪಡಿಸುವ ಕೆಲಸ ನಡೆಯಿತು.
ತರಕಾರಿ ಮತ್ತು ಔಷದ ಅಂಗಡಿಯ ಮಾಲೀಕರು ಹಾಗೂ ಜನಗಳ ಮಧ್ಯ ಅಂತರವನ್ನು ಕಾಹಿದುಕೊಳ್ಳಲಿಕ್ಕೆ ಒಂದು ಮೀಟರಿಗೆ ಒಂದರಂತೆ ಚೌಕಕಾರ ರೇಖೆ ಹಾಕುವುದರ ಮೂಲಕ ವೈರಸ್ ತಡೆಗೆ ಪಟ್ಟಣ ಪಂಚಾಯಿತಿ
ಮುಖ್ಯಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯನವರು ಕ್ರಮವನ್ನು ತೆಗೆದುಕೊಂಡರು.