ದಾವಣಗೆರೆ ಜಿಲ್ಲೆ ;- ಹೊನ್ನಾಳಿ ತಾಲೂಕು ಚಿಕ್ಕಗೋಣಗೇರಿ ವಾಸಿಯಾದ ಸನಂತ್ ಕುಮಾರ್ ಬಿನ್ ಚಂದ್ರಪ್ಪ ಬಳೇಶ್ವರ ಎಂಬ 62 ವಯಸ್ಸಿನ ವ್ಯಕ್ತಿಯು ಗದಗ ಜಿಲ್ಲೆ ಸಿರಹಟ್ಟಿ ತಾಲೂಕು ಬನ್ನಿಕೊಪ್ಪ ಗ್ರಾಮದ ತನ್ನ ಸಂಬಂಧಿಕರಾದ ಸಕ್ರಪ್ಪ ಬಸಪ್ಪ ಹೊಸುರಾ ಇವರ ಮನೆಯಲ್ಲಿ ದಿನಾಂಕ 27/03/2020 ರಂದು ರಾತ್ರಿ 8;30ರ ಸಮಯಕ್ಕೆ ಹೃದಯಘಾತದಿಂದ
ನಿಧನರಾಗಿದ್ದು ವ್ಯಕ್ತಿಯ ಪತ್ನಿಯವರಾದ ಶ್ರೀಮತಿ ಕವಿತ ಸಿ.ಎಸ್ ಇವರ ಇಚ್ಚೆಗೆ ಅನೂಸಾರ ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕರಾ ಮಾಡಲು ಬನ್ನಿಕೊಪ್ಪ ತಾಲೂಕು ಸಿರಹಟ್ಟಿ ಗದಗ ಜಿಲ್ಲೆ ಇಲ್ಲಿಂದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಚಿಕ್ಕಗೋಣಗೇರಿ ಗ್ರಾಮಕ್ಕೆ ಶವವನ್ನು ಸಾಗಿಸಲು ಅನುಮತಿ ನೀಡಿದೆ ಎಂದು ಅಲ್ಲಿನ ಗ್ರಾಮ ಪಂಚಾಯಿತಿಯ ಅಧ್ಯಕ್ಷರ
ಸಹಿಯ ಪತ್ರ ಇದೆ. ಯಾಕೆ ಈ ಮಾತನ್ನು ಪುನಃ ಹೇಳುತಿದ್ದೆವೆ ಎಂದರೆ ಚಿಕ್ಕಗೋಣಗೇರಿ ವಾಸಿಯ ಮೃತರ ದೇಹವನ್ನು ತರಲು ಈ ಗ್ರಾಮದಿಂದ ಲಾರಿಯ ಸಂಖ್ಯೆ ಕೆಎ 27 ಬಿ 8334ರಲ್ಲಿ ಸುಮಾರು ನಾಲ್ಕು ಜನ ಇಲ್ಲಿಂದ ತೆರಳಿ ಪುನಃ
ಅಲ್ಲಿಂದ ಇದೇ ವಾಹನದಲ್ಲಿ ಶವವನ್ನು ತಗೆದುಕೊಂಡು ಬರುತ್ತಾರೆ, ಗೋಣಗೇರಿ ಗ್ರಾ.ಪ ಅಧ್ಯಕ್ಷರ ಸಹಿಯು ಸಹ ಇರುತ್ತದೆ. ಇದರ ಅರ್ಥ ಇವರು ಕೊರೋನಾ ವೈರಸ್ ನಿಂದ ಸಾವನ್ನ್ ಪ್ಪಿದ್ದಾರೆ ಎಂದು ಗೋಣಗೇರಿ ಸುತ್ತಮುತ್ತಲಿನ ಗ್ರಾಮದವರು ಬಯಬೀತರಾಗಿ
ಹೊನ್ನಾಳಿ ಎ.ಬಿ.ಸಿ ನ್ಯೂಸ್ ಚಾನಲ್ ಗೆ ಪೋನ್ ಕರೆಯ ಮೂಲಕ ತಿಳಿಸಿದ್ದರು. ಸಂಪದಾಕರಾದ ಅರವಿಂದ ಎಸ್
ತದಾದನಂತರ ತಾಲೂಕು ಇ.ಇ.ಓರವರಿಗೆ ಮತ್ತು ಅಲ್ಲಿನ ಗ್ರಾ.ಪ ಪಿ.ಡಿ.ಓ ಹಾಗೂ
ಆಶಾ ಕಾರ್ಯಕರ್ತೆ ಮತ್ತು ಗೋಣಗೇರಿ ಗ್ರಾ.ಪ ಹಾಲಿ ಅಧ್ಯಕ್ಷರಾದ ಪದ್ಮ ಲತಾ ನವೀನ್ ಮತ್ತು ಮಾಜಿ ಗ್ರಾ.ಪ ಅಧ್ಯಕ್ಷರಾದ ಸಂತೋಷ ಕುಮಾರ್ ಹಾಗೂ ವಿದ್ಯಾಧರ ಇವರುಗಳಿಗೆ ಕರೆಯ ಮೂಲಕ ವಿಷಯವನ್ನು ಸಂಗ್ರಹಿಸಿ ತಿಳಿದುಕೊಂಡು ನಮ್ಮ ನ್ಯೂಸ್ ಮೂಲಕ ಗೋಣಗೇರಿ ಅಕ್ಕಪಕ್ಕದ ಗ್ರಾಮದವರಿಗೆ ತಿಳಿಸುವುದೇ ಎಂದರೆ ಅವರು ಕೊರೋನಾ ವೈರಸ್ ನಿಂದ ಮರಣವನ್ನು ಹೊಂದಿಲ್ಲ, ಆದ ಕಾರಣ ಯಾವುದೇ ಅಕ್ಕಪಕ್ಕದ ಗ್ರಾಮದವರು ಬಯಬೀತರಾಗುವುದು ಬೇಡ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ.