ದಾವಣಗೆರೆ: ದಾವಣಗೆರೆ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ
ಸಂಘದಿಂದ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ
ಆಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ
ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದು, ಇಂದು
50 ಕ್ವಿಂಟಾಲ್ ಅಕ್ಕಿಯನ್ನು ಶಾಸಕರು, ಸಂಘದ
ಗೌರವಾಧ್ಯಕ್ಷರಾದ ಡಾ|| ಶಾಮನೂರು
ಶಿವಶಂಕರಪ್ಪನವರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ
ಹಸ್ತಾಂತರಿಸಲಾಯಿತು.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ 5 ಕೆ.ಜಿ
ತೂಕದ 1 ಸಾವಿರ ಅಕ್ಕಿ ಪಾಕೇಟ್ ಗಳನ್ನು ಹಸ್ತಾಂತರಿಸಿದ
ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ
ಮಾತನಾಡಿದ ಶಾಮನೂರು ಶಿವಶಂಕರಪ್ಪನವರು ಲಾಕ್
ಡೌನ್ ಬಹುತೇಕ ನಾಗರೀಕರು ಸ್ಫಂದಿಸುತ್ತಿದ್ದು ಕೆಲವರು
ವಿನಾಕಾರಣ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ. ಅವರಿಗೆ ಕಡಿವಾಣ
ಹಾಕಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು,
ನಿರಾಶ್ರಿತರಿಗೆ ಅನ್ನದ ಅವಶ್ಯಕತೆ ಇರುವುದನ್ನು
ಮನಗಂಡು ಅಕ್ಕಿಯನ್ನು ಸಂಘದ ವತಿಯಿಂದ
ನೀಡಲಾಗಿದೆ ಎಂದು ತಿಳಿಸಿದರು.
ಅಕ್ಕಿ ಪಡೆದ ಜಿಲ್ಲಾಧಿಕಾರಿಗಳು ತಾವು ನೀಡಿರುವ ದಾನ ಅರ್ಹ
ನಿರಾಶ್ರಿತರಿಗೆ ತಲುಪಿಸಲಾಗುದು ಎಂದು ತಿಳಿಸಿ ತಕ್ಷಣ
ಜಿಲ್ಲಾಡಳಿತ ವಶಕ್ಕೆ ಪಡೆದು ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ
ಸಂಘದವರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಜಿಲ್ಲಾ
ಅಕ್ಕಿ ಗಿರಣಿ ಮಾಲೀಕರ ಸಂಘದ ಕೋಗುಂಡಿ ಬಕ್ಕೇಶಪ್ಪ,
ಮತ್ತಿಹಳ್ಳಿ ವೀರಣ್ಣ, ಚಂದ್ರಪ್ಪ, ಛಗನ್ ಲಾಲ್, ನಂದಿಗಾವಿ
ರಾಜಣ್ಣ, ಎನ್‍ಎಂಕೆ ರಾಜಣ್ಣ, ಸತೀಶ್ ವೈಬಿಎಸ್, ಅನಿಲ್‍ಕುಮಾರ್ ಸಿಂಗ್,
ಉಳವಯ್ಯ ಎಸ್.ಹೆಚ್., ರಾಜು ಸೇರಿದಂತೆ ಅಕ್ಕಿ ಗಿರಣಿ
ಮಾಲೀಕರುಗಳಿದ್ದರು.