ದಾವಣಗೆರೆ ಏ.01
ಕೋವಿಡ್-19 ಲಾಕ್ಡೌನ್ ಹಿನ್ನಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆದ ರೈತರುಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಸರಬರಾಜು ವ್ಯವಸ್ಥೆ ಹಾಗೂ ಮಾಹಿತಿ ಕೊರತೆಯಿಂದಾಗಿ ತೊಂದರೆ ಉಂಟಾಗಿದ್ದು, ಬೆಳೆ ಕಟಾವಿಗೆ ಬಂದಂತಹ ಹಣ್ಣು ಮತ್ತು ತರಕಾರಿಗಳನ್ನು ಬೆಳೆದ ಜಿಲ್ಲೆಯ ರೈತರು ಅವರಿಗೆ ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಹೋಬಳಿಯ ರೈತ ಸಂರ್ಪಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂರ್ಪಕಿಸಬಹುದಾಗಿದೆ.
ಸಂಬಂಧಪಟ್ಟ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ದೂರವಾಣಿ ಮೂಲಕ ಸಂರ್ಪಕಿಸಬಹುದಾಗಿದೆ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ, ದಾವಣಗೆರೆ ಮೊ.ನಂ 9632650864, ಚನ್ನಗಿರಿ ಮೊ.ನಂ 9449759777, ಹೊನ್ನಾಳಿ ಮೊ.ನಂ 7625078025, ನ್ಯಾಮತಿ ಮೊ.ನಂ 7625078025, ಹರಿಹರ ಮೊ.ನಂ 7625078054, ಜಗಳೂರು ಮೊ.ನಂ 7625078041 ಇವರನ್ನು ಸಂರ್ಪಕಿಸಬಹುದೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.