ದಾವಣಗೆರೆ ಏ.1
ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಹಾಗೂ ಈ ರೋಗದ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇವರ ಮುಖಾಂತರ ದೊಡ್ಡಬಾತಿಯ ರೈತ ದಂಪತಿಗಳಾದ ದ್ಯಾಮನಾಯ್ಕ್ ಚವ್ಹಾಣ್ ಮತ್ತು ನಾಗರತ್ನಮ್ಮ ಇವರು ಮುಖ್ಯಂಮಂತ್ರಿಗಳ ಪರಿಹಾರ ನಿಧಿಗೆ ರೂ.50 ಸಾವಿರಗಳ ಚೆಕ್ ಹಾಗೂ 1000 (ಒಂದು ಸಾವಿರ ಸಂಖ್ಯೆಯ) ತೆಂಗಿನಕಾಯಿಗಳನ್ನು ನೀಡಿದರು.
ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ದಾನಿಗಳ ಪುತ್ರ ಅನುರಾಗ್ ಚವ್ಹಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ದಾವಣಗೆರೆ ತಾಲ್ಲೂಕಿನ ತಹಶೀಲ್ದಾರ್ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *