ದಾವಣಗೆರೆ ಮಹಾನಗರ ಪಾಲಿಕೆಯ 16ನೇ ವಾರ್ಡ್ನ
ವಿನೋಬನಗರದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ
ಎ.ನಾಗರಾಜ್ ಅವರ ನೇತೃತ್ವದಲ್ಲಿ ರಸಾಯನಿಕ ಸಿಂಪರಣೆ
ಮಾಡಲಾಯಿತು.
ನಿನ್ನೆ ಸಂಜೆ ಮತ್ತು ಇಂದು ವಿನೋಬನಗರದ
ಮನೆಮನೆಗೆ ಖುದ್ದು ಎ.ನಾಗರಾಜ್ ಅವರೇ ತೆರಳಿ
ರಸಾಯನಿಕ ಸಿಂಪರಣೆ ಮಾಡುವುದರ ಜೊತೆಗೆ
ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ
ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ
ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿನೋಬನಗರದ ಕಾಂಗ್ರೆಸ್ ಪಕ್ಷದ
ಮುಖಂಡರು, ಮಹಾನಗರ ಪಾಲಿಕೆ ಅಧಿಕಾರಿ ಮತ್ತು
ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.