ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಏ 3 ದೇವನಾಯಕಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ವಾಸವಾಗಿರುವ ಮಹಾರಾಷ್ಟ ಮೂಲದ ಸಾಯಿ ಬಾಬಾ ಸಂಚಾರದ ಅಲೆಮಾರಿ ಸಮುದಾಯಕ್ಕೆ ಹೊನ್ನಾಳಿ ತಾಲೂಕಿನ ಎನ್.ಎಸ್.ಯು.ಐ ವತಿಯಿಂದ 2/4/2020 ರಿಂದ 14/4/2020ರ ವರೆಗೆ ಆಹಾರವನ್ನು ದಿನನಿತ್ಯ 50ರಿಂದ 60 ಜನಗಳ ಅಲೆಮಾರಿ ಸಮುದಾಯಕ್ಕೆ ವಿತರಣೆಯನ್ನು ಮಾಡಲಿಕ್ಕೆ
ಹೊನ್ನಾಳಿಯ ಎನ್.ಎಸ್.ಯು.ಐ ವತಿಯಿಂದ
ಹಮ್ಮಿಕೊಂಡಿದ್ದು, ಇಂದು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ
ಡಿ.ಜಿ ಶಾಂತನಗೌಡ್ರುರವರು ಎರಡನೇಯ ದಿನದ ಆಹಾರ ವಿತರಣೆಯ ಕಾರ್ಯಕ್ರಮದಲ್ಲಿ ಆ ಅಲೆಮಾರಿ ಸಮುದಾಯಕ್ಕೆ
ಅನ್ನ ಮತ್ತು ಸಾಂಬಾರ್ ಬಡಿಸುವುದರ ಮೂಲಕ ಅಧಿಕೃತವಾಗಿ ಚಾಲನೆಯನ್ನು ಕೊಟ್ಟರು.
ಇವರುಗಳ ಉಪಸ್ಥಿತಿಯಲ್ಲಿ;- ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು ಹೊನ್ನಾಳಿ ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆರ್
ನಾಗಪ್ಪ, ಎನ್.ಎಸ್.ಯು.ಐ ರಾಜ್ಯ ವಕ್ತಾರ ದರ್ಶನ್, ಮತ್ತು ಎನ್.ಎಸ್.ಯು.ಐ ಹೊನ್ನಾಳಿ ತಾಲೂಕು ಅಧ್ಯಕ್ಷ ಮನೋಜ್, ಹಾಗೂ
ಎನ್.ಎಸ್.ಯು.ಐ ಕಾರ್ಯಕರ್ತರು ಮತ್ತು ಸ್ನೇಹಿತರು ಸಹ ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *