ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಏ 4 ಕುಂಕೂವ ಗ್ರಾಮದ ರೈತರಾದ ಗಾದೇರ್ ಗೋಪಾಲಪ್ಪ ಎಂಬ ರೈತರು ತಾನು ತಮ್ಮ ಜಮೀನಿನ ಸರ್ವೆ ನಂಬರ್ 112 ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯು 200 ಕ್ವಿಂಟಾಲ್ ಆಗಬೇಕಾಗಿತ್ತು ಇವತ್ತಿನ ಪರಿಸ್ಥಿಯಲ್ಲಿ 50 ರಿಂದ 60 ಕ್ವಿಂಟಾಲ್ ಬೆಳೆ ಬಂದಿದೆ ಆ ಬೆಳೆಗೆ ಕರ್ಚು ಮಾಡಿರುವುದು 40 ರಿಂದ 50 ಸಾವಿರ ಎಷ್ಟೋ ಅಗಲಿ
ಬಂದಿದೆ ಎಂದು
ಅದನ್ನು ಮಾರಿ ಸಾಲ ಕಟ್ಟೋಣ ಅನ್ನು ವಷ್ಟರಲ್ಲಿ ಕೊರೋನಾ ವೈರಸ್ ಬಂದಿರುವ ಕಾರಣ ಸರ್ಕಾರದ ಆದೇಶ ಮನೆಯಿಂದ ಯಾರು ಕೂಡ ಹೊರಗೆ ಬರಬಾರದು ಮತ್ತು ಹೊಲಕ್ಕೆ ಹೊಗಬಾರದು ಎಂದು ಮನಗೊಂಡು ಈರುಳ್ಳಿಯನ್ನು ಕರೀದಿ ಮಾಡಲಿಕ್ಕೆ ಯಾರು ಬರುತ್ತಿಲ್ಲ, ಬಂದರು ಸಹ ದಲ್ಲಾಳಿಗಳು ಬಾಯಿಗೆ ಬಂದಹಾಗೆ ಕೇಳುತ್ತಾರೆ. ನಾವೇ ಈರುಳ್ಳಿಯನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೊಗೋಣ ಎಂದರೆ ಪೋಲಿಸರ ಬಯದಿಂದ ಹೊಗುತ್ತಿಲ್ಲ. ಸರ್ಕಾರದ ಕೃಷಿ ಸಚಿವರು ರಾಜ್ಯದಲ್ಲಿ ಇದ್ದಾರೆಹೇ, ಅವರುಗಳು ಇದ್ದುದೆಯಾದರೆ ರೈತರ ಸಮಸ್ಯೆಗಳನ್ನು ಕೇಳಲಿಕ್ಕೆ ಬರುತ್ತಿದರು.

ರಾಜ್ಯದಲ್ಲಿ ಯಾವುದೇ ರೈತರು ಸಾಲದ ಸೂಲಕ್ಕೆ ಸತ್ತರೆ ನೇರವಾಗಿ ಕೃಷಿ ಸಚಿವರೆ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಅರೋಪಿಸುತ್ತಾ ಈಗಲಾದರು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರು ಬೆಳೆದಂತ ಬೆಳೆಗಳಿಗೆ ಸರ್ಕಾರವೇ ನೇರವಾಗಿ ಕರೀದಿ ಮಾಡಬೇಕೆಂದು ಈ ಮೂಲಕ ರೈತ ಮುಖಂಡರಾದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಗೌರವಧ್ಯಕ್ಷರಾದ ಗಾದೇರ್ ಗೋಪಾಲಪ್ಪನವರು ಸರ್ಕಾರಕ್ಕೆ ವತ್ತಾಹಿಸಿದರು. ಇವರುಗಳ ಜೊತೆಗೆ ರೈತರುಗಳಾದ ಬಸಪ್ಪ, ಮಹೇಶಪ್ಪ ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *