ದಾವಣಗೆರೆ ಜಿಲ್ಲೆ;- ದಾವಣಗೆರೆ ಏ 5 ಕೊರೋನಾ ವೈರಸ್ 19 ಬಂದಿರುವ ಕಾರಣ ದೇಶಾಧ್ಯಂತ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ಪ್ರಧಾನ ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಭಾರತ ದೇಶ ಮತ್ತು ಕರ್ನಾಟಕ ರಾಜ್ಯಧ್ಯಂತ ಜನಗಳಿಗೆ ದುಡಿಮೆ ಇಲ್ಲದ ಕಾರಣ ಬೆಸ್ಕಾಂ ನವರಿಗೆ ನಿಮ್ಮ ನಿಮ್ಮ ಮನೆಯ ಕರೇಂಟ್ ಬಿಲ್ಲ್ ನ್ನು ಮೂರು ತಿಂಗಳು ಅವಧಿಯವರೆಗೆ ಕಟ್ಟ ಬೇಡಿ ಎಂದು ಕೇಂದ್ರ ಸರ್ಕಾರದ ಆದೇಶ ಮಾಡಿದೆ. ಈ ಆದೇಶವನ್ನು ಪ್ರತಿಯೊಬ್ಬರು ಸ್ವಾಗತಿಸೋಣ, ಆದರೆ ಮೂರು ತಿಂಗಳು
ಅವಧಿಯವರೆಗೆ ಬಿಲ್ಲನ್ನ ಪಾವತಿ ಮಾಡದಿದ್ದರೆ ಅಸಲು ಮತ್ತು ಬಡ್ಡಿ ಸಮೇತ ಕಟ್ಟಬೇಕಾಗುತ್ತದೆ. ಇದು ಬೆಸ್ಕಾಂನವರ ನಿಯಮ ಆದ ಕಾರಣ ನೀವು ಕರೆಂಟ್ ಬಿಲ್ಲ್ ನ್ನು ಕಟ್ಟಬೇಕಾದರೆ ಆನ್ ಲೈನ್ ಮೂಲಕ ಬಿಲ್ಲ್ ಪಾವತಿಸಬಹುದು. ಕೊರೋನಾ ವೈರಸ್ 19 ಲಾಕ್ ಡೌನ್ ಮುಗಿದು ಯಥಾಸ್ಥಿತಿಗೆ ಬಂದ ನಂತರ ಆಫಿಸ್ ಗಳಿಗೆ ಬಂದು ಜನಗಳು ಕಟ್ಟಬಹುದು ಎಂದು ಎ.ಬಿ.ಸಿ ನ್ಯೂಸ್ ಆನ್ ಲೈನ್ ಚಾಲನ್ ಮೂಲಕ ಬೆಸ್ಕಾಂ ಅಧಿಕಾರಿಗಳು ಜನಗಳಿಗೆ ಮನವಿ ಮಾಡಿಕೊಂಡಿದ್ದಾರೆ.