ಇನ್ನೊಬ್ಬರ
ಫಲಿತಾಂಶ ನಾಳೆ ಹೊರಬೀಳಲಿದ್ದು, ಅವರೂ ಸಹ
ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಭರವಸೆ ಇದ್ದು ಜಿಲ್ಲೆಗೆ
ಇದೊಂದು ಸಂತಸದ ಸುದ್ದಿಯಾಗಿದೆ. ಇನ್ನು ಮುಂದೆಯೂ
ಕೊರೊನಾ ವಿರುದ್ದ ಸಮರ ಸಾರಲು ಜಿಲ್ಲಾಡಳಿತದ
ತಂಡಗಳು ಸನ್ನದ್ದವಾಗಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಹೇಳಿದರು.
ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಕೊರೊನಾ ವೈರಸ್
ಸೋಂಕು ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ
ಚರ್ಚಿಸಲು ಕರೆಯಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿ, ಜಿಲ್ಲೆಯಲ್ಲಿ ಮತ್ತೆ ಯಾವುದೇ ಕೊರೊನಾ ಪಾಸಿಟಿವ್
ಪ್ರಕರಣ ವರದಿಯಾಗದಂತೆ ಎಲ್ಲ ತಂಡಗಳು ಶ್ರಮ
ವಹಿಸೋಣ ಎಂದ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ
ಇಬ್ಬರು ಗುಣಮುಖವಾದ ಸೋಂಕಿತರನ್ನು ಅಧಿಗ್ರಹಣ
ಮಾಡಿಕೊಳ್ಳಲಾದ ಜಿಎಂಐಟಿಯಲ್ಲಿ 14 ದಿನಗಳ ಇನ್ಸ್ಟಿಟ್ಯೂಷನಲ್
ಅವಲೋಕನ ಅವಧಿಯಲ್ಲಿ ಇರಿಸಲಾಗುವುದು ಎಂದರು.
ಚೆಕ್‍ಪೋಸ್ಟ್‍ಗಳಲ್ಲಿ ಸರಕು ಸಾಗಾಣಿಕೆ ಮತ್ತು ರೈತರ
ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ
ತೊಂದರೆ ಅಥವಾ ಅಡ್ಡಿಪಡಿಸದೇ ಸರಾಗ ಓಡಾಟಕ್ಕೆ ಅವಕಾಶ
ಮಾಡಿಕೊಡಬೇಕೆಂದು ಸರ್ಕಾರ ಆದೇಶಿಸಿದ್ದು ಚೆಕ್‍ಪೋಸ್ಟ್‍ನ
ಎಲ್ಲ ಅಧಿಕಾರಿ/ಸಿಬ್ಬಂದಿಗಳು ಈ ಬಗ್ಗೆ ಕ್ರಮ ವಹಿಸಬೇಕು. ನಾನೇ

ಸ್ವತಃ ಮಾರುವೇಷದಲ್ಲಿ ಬಂದು ಈ ಬಗ್ಗೆ ಪರಿಶೀಲನೆ
ನಡೆಸುತ್ತೇನೆ ಎಂದರು.
ರೈತರ ಯಾವುದೇ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ
ಕ್ರಮ : ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ
ತೊಂದರೆಯಾಗದಂತೆ ಕೃಷಿ ಇಲಾಖೆ ಸೇರಿದಂತೆ ಎಲ್ಲರೂ
ಸಹಕರಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ, ಇತರೆ
ಸಾಮಗ್ರಿಗಳನ್ನು ಆದಷ್ಟು ತಾಲ್ಲೂಕು
ಕೇಂದ್ರಗಳಲ್ಲಿಯೇ ರೈತರು ಖರೀದಿಸಬೇಕು. ಕೃಷಿ ಜಂಟಿ
ನಿರ್ದೇಶಕರು ಕೃಷಿಗೆ ಅಗತ್ಯವಾದ ಎಲ್ಲ ರೀತಿಯ
ಸೌಲಭ್ಯಗಳನ್ನು ಒದಗಿಸಬೇಕೆಂದರು. ಹಾಗೂ ಕೃಷಿ
ಪರಿಕರಗಳು ಮತ್ತು ಕ್ರಿಮಿನಾಶಕ ಅಂಗಡಿಗಳ
ಮಾಲೀಕರ ಸಭೆ ನಡೆಸಿ ಯಾವುದೇ ಸಮಸ್ಯೆಯಾಗದಂತೆ
ಕೃಷಿ ಪರಿಕರಗಳನ್ನು ಸರಬರಾಜು ಮಾಡುವಂತೆ ಸೂಚನೆ
ನೀಡಲು ತಿಳಿಸಿದರು.
ಅನಗತ್ಯವಾಗಿ ಯಾರೇ ಓಡಾಡಿದರೂ ಕಠಿಣ ಕ್ರಮ : ಲಾಕ್‍ಡೌನ್
ಹಿನ್ನೆಲೆ ಜಿಲ್ಲಾದ್ಯಂತ ರಸ್ತೆಗಳಲ್ಲಿ ಅನಗತ್ಯವಾಗಿ ಯಾರೇ
ಓಡಾಡಿದರೂ ಅತ್ಯಂತ ಕಠಿಣವಾದ ಕ್ರಮ
ಕೈಗೊಳ್ಳಲಾಗುವುದು. ಇಂದಿನಿಂದಲೇ ಅನಗತ್ಯವಾಗಿ
ಓಡಾಡುವವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು
ಎಚ್ಚರಿಕೆ ನೀಡಿದರು. ಜೊತೆಗೆ ಕೆಲವರು ಪಾಸ್‍ಗಳನ್ನು
ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ
ಬಂದಿದ್ದು ಇಂತಹವರ ವಿರುದ್ದವೂ ಕ್ರಮ
ಕೈಗೊಳ್ಳಲಾಗುವುದು ಎಂದರು.
ಅಂತ್ಯೋದಯ ಕಾರ್ಡಿಗೆ ಎರಡು ತಿಂಗಳಿಗೆ 70 ಕೆ.ಜಿ.ಅಕ್ಕಿ
ನೀಡಲಾಗುವುದು. ಬಿಪಿಎಲ್ ಕಾರ್ಡಿಗೆ ಒಬ್ಬ ವ್ಯಕ್ತಿಗೆ 10 ಕೆ.ಜಿ ಅಕ್ಕಿ
ಹಾಗೂ ಒಂದು ಕಾರ್ಡಿಗೆ 4 ಕೆ.ಜಿ. ಗೋದಿ ನೀಡಲಾಗುವುದು. ಎಪಿಎಲ್
ಕಾರ್ಡಿಗೆ ಒಂದು 1 ಕೆ.ಜಿಗೆ ರೂ.15 ರಂತೆ 10 ಕೆ.ಜಿ. ಅಕ್ಕಿ ಹಾಗೂ
ಗರಿಷ್ಟ ರೂ.15 ರಂತೆ 20 ಕೆ.ಜಿ ಅಕ್ಕಿ ನೀಡಲಾಗುವುದು. ಓಟಿಪಿ
ಇಲ್ಲದಿದ್ದರೂ ಸಹ ಪಡಿತರ ಚೀಟಿದಾರರ ಸಹಿ ಪಡೆದು ಪಡಿತರ
ನೀಡಬೇಕೆಂದರು.
ಇಂದು ಪಡಿತರ ವಿತರಣೆ ಕೇಂದ್ರವೊಂದಕ್ಕೆ ನಾನೇ ಸ್ವತಃ
ಭೇಟಿ ನೀಡಿದ ವೇಳೆ ರೂ.40 ನ್ನು ಪಡೆದು ಪಡಿತರ
ವಿತರಿಸುತ್ತಿದ್ದುದ್ದುದು ಗಮನಕ್ಕೆ ಬಂದಿದೆ. ಆ
ಅಂಗಡಿಯವರಿಗೆ ಈ ಕುರಿತು ಎಚ್ಚರಿಕೆ ನೀಡಿದ್ದೇನೆ.
ಅಂಗಡಿಗಳಲ್ಲಿ ಪಡಿತರದೊಂದಿಗೆ ಉಪ್ಪು, ಗೋಧಿಹಿಟ್ಟು
ತೆಗೆದುಕೊಂಡರೆ ಮಾತ್ರ ಪಡಿತರ ನೀಡಲಾಗುವುದೆಂದು
ಕಡ್ಡಾಯಗೊಳಿಸದೇ, ಉಚಿತವಾಗಿ ಎರಡು ತಿಂಗಳ
ಪಡಿತರವನ್ನು ನೀಡಬೇಕು. ಉಪವಿಭಾಗಾಧಿಕಾರಿ ಮತ್ತು

ತಹಶೀಲ್ದಾರರ ತಂಡ ಬಂದು ಪಡಿತರ ವಿತರಣೆ ಕುರಿತು
ಪರಿಶೀಲನೆ ನಡೆಸುವರೆಂದರು.
ಜಿಲ್ಲೆಯಲ್ಲಿ ಕೆಲವೆಡೆ ಅಡುಗೆ ಅನಿಲ ಸಾಗಾಣಿಕೆ
ವಾಹನಗಳನ್ನು ತಡೆದು ಅಡ್ಡಿಪಡಿಸುತ್ತಿರುವುದು
ಗಮನಕ್ಕೆ ಬಂದಿದ್ದು, ಯಾರೂ ಕೂಡ ಅಡ್ಡಿಪಡಿಸಬಾರದು
ಎಂದರು.
ಕೋಳಿ, ಮೀನು, ಕುರಿ ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ
ಅಂತರ ಕಾಯ್ದುಕೊಂಡು ಸಾರ್ವಜನಿಕರು ಖರೀದಿ
ಮಾಡಬೇಕು. ಜನದಟ್ಟಣೆಯಾದಲ್ಲಿ ಅಂಗಡಿಗಳ ಲೈಸೆನ್ಸ್
ರದ್ದುಪಡಿಸಲಾಗುವುದು ಎಂದರು.
ಜನ್‍ಧನ್ ಮತ್ತು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಖಾತೆಗೆ
ಸರ್ಕಾರ ಹಣ ಜಮಾ ಮಾಡುತ್ತಿದ್ದು, ಬ್ಯಾಂಕುಗಳಲ್ಲಿ
ಜನದಟ್ಟಣೆಯಾಗದಂತೆ ಬ್ಯಾಂಕುಗಳು ಕ್ರಮ
ವಹಿಸಬೇಕು ಎಂದರು.
ಎನ್95 ಮಾಸ್ಕ್ ಎಲ್ಲರಿಗೂ ಅವಶ್ಯವಲ್ಲ. ಕೆಲ ಸಾಮಾನ್ಯ ಜನರೂ
ಇದನ್ನು ಬಳಸುತ್ತಿದ್ದು, ಇದು ಕೇವಲ ರೋಗಿ ಜೊತೆ
ಇರುವವರಿಗೆ ಹಾಗೂ ತಪಾಸಣೆ ಮಾಡುವ ವೈದ್ಯರಿಗೆ
ಅವಶ್ಯವಿದ್ದು ಸಾರ್ವಜನಿಕರು ಬಟ್ಟೆಯ ಅಥವಾ ತ್ರಿಪಲ್
ಲೇಯರ್ ಮಾಸ್ಕ್‍ನ್ನು ಬಳಸಬಹುದು. ಎನ್95 ಮಾಸ್ಕ್ ವೈದ್ಯರಿಗೇ
ಕೊರತೆ ಇದ್ದು ಸಾರ್ವಜನಿಕರು ಬಳಸದಂತೆ ಮನವಿ
ಮಾಡಿದರು.
247 ಸಹಾಯವಾಣಿ 1077 : ಲಾಕ್‍ಡೌನ್ ಹಿನ್ನೆಲೆ ಸಾರ್ವಜನಿಕರು ತಮ್ಮ ಯಾವುದೇ ಕುಂದುಕೊರತೆಗಳಿಗಾಗಿ ಜಿಲ್ಲಾಡಳಿತ ಕಚೇರಿಯಲ್ಲಿರುವ 1077 ಸಹಾಯವಾಣಿಗೆ 247 ಕರೆ
ಮಾಡಬಹುದು ಎಂದರು.
ಜಿಲ್ಲೆಯಲ್ಲಿ ಬೆಳೆಯಲಾಗಿರುವ ಸಿಹಿಗುಂಬಳವನ್ನು ಕೋಲ್ಡ್
ಸ್ಟೋರೇಜ್ ನಲ್ಲಿ ಶೇಖರಿಸಿ ಮುಂದೆ
ಉಪಯೋಗಿಸಬೇಕೆಂದರು. ಹೆಚ್ಚಾಗಿರುವುದನ್ನು ಅಕ್ಕ
ಪಕ್ಕದ ಜಿಲ್ಲೆಗಳಿಗೆ ಕಳುಹಿಸುವಂತೆ ತಿಳಿಸಿದರು.
ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ
ಹೋಗದೆ ಆಯುರ್ವೇದ ಔಷಧಿಗಳನ್ನು, ಮನೆ
ಮದ್ದನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಮುಖ್ಯಮಂತ್ರಿಗಳ ಶ್ಲಾಘನೆ : ಇಂದು ಖಾಸಗಿ ವಿದ್ಯುನ್ಮಾನ
ವಾಹಿನಿಯಲ್ಲಿ ಮುಖ್ಯಮಂತ್ರಿಗಳ ಸಂದರ್ಶನ ವೇಳೆ
ನಿರೂಪಕರು ದಾವಣಗೆರೆ ಜಿಲ್ಲಾಧಿಕಾರಗಳ ಕಾರ್ಯ
ಚಟುವಟಿಕೆಯನ್ನು ವಿವರಿಸದ್ದಕ್ಕೆ ಮುಖ್ಯಮಂತ್ರಿಗಳಾದ
ಬಿ.ಎಸ್.ಯಡಿಯೂರಪ್ಪನವರು ಮುಕ್ತಕಂಠದಿಂದ
ಶ್ಲಾಘಿಸಿದ್ದನ್ನು, ಜಿಲ್ಲಾಧಿಕಾರಿಗಳು ಈ ಶ್ರೇಯಸ್ಸು ತಮ್ಮೆಲ್ಲ
ತಂಡದ ಅಧಿಕಾರಿಗಳು/ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದು ಹರ್ಷ

ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ನೋಡಲ್ ಅಧಿಕಾರಿ
ಪ್ರಮೋದ್ ನಾಯಕ್, ಎಸಿ ಮಮತಾ ಹೊಸಗೌಡರ್, ಪಾಲಿಕೆ
ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಓ
ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರ
ಡಾ.ರಾಘವನ್, ಸ್ಮಾರ್ಟ್‍ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ್, ಕೃಷಿ ಜಂಟಿ
ನಿರ್ದೇಶಕ ಶರಣಪ್ಪ ಮುದಗಲ್, ಆಹಾರ ಇಲಾಖೆ
ಉಪನಿರ್ದೇಶಕ ಮಂಟೇಸ್ವಾಮಿ, ತೋಟಗಾರಿಕೆ ಇಲಾಖೆ ಡಿಡಿ
ಲಕ್ಷ್ಮೀಕಾಂತ್ ಬೊಮ್ಮನ್ನಾರ್, ವಿಶೇಷ
ಭೂಸ್ವಾಧೀನಾಧಿಕಾರಿಗಳಾದ ರೇಷ್ಮಾ ಹಾನಗಲ್, ಸರೋಜ ಇತರೆ
ಜಿಲ್ಲಾ ಮಟ್ಟದ ಅಧಿಕಾರಿಗಳು

Leave a Reply

Your email address will not be published. Required fields are marked *