ದಾವಣಗೆರೆ ಏ.06
      ಏಪ್ರಿಲ್ 5 ರಿಂದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕುರಿ, ಮೇಕೆ
ಮಾಂಸ ಮಾರಾಟ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು
ಆದೇಶಿಸಿದ್ದು, ಕುರಿ, ಮೇಕೆ ಮಾಂಸ ಮಾರಾಟಗಾರರು ಅತೀ
ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿರುವುದು
ಕಂಡುಬಂದಿರುತ್ತದೆ. ಆದ್ದರಿಂದ ಪ್ರತೀ ಕೆ.ಜಿಗೆ ರೂ. 500/-
ಗಳನ್ನು ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಬೆಲೆಗೆ ಮಾರಾಟ
ಮಾಡಿದಲ್ಲಿ ಅಂತಹವರ ವಿರುದ್ಧ ಈ ಪ್ರಾಧಿಕಾರದಿಂದ
ನಿಯಮಾನುಸಾರ ಅಗತ್ಯ ಕಾನೂನು ಕ್ರಮ
ಕೈಗೊಳ್ಳಲಾಗುವುದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

ಸಾಮೂಹಿಕ ಪ್ರಾರ್ಥನೆ ನಿಷೇಧ

 ದಾವಣಗೆರೆ, ಏ.07
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬೆಂಗಳೂರು ಇವರು
ಕೋವಿಡ್-19 ವೈರಸ್ ಸಾಂಕ್ರ್ರಾಮಿಕ ರೋಗ ತಡೆಯುವ
ಉದ್ದೇಶದಿಂದ ಏ.9 ರಂದು ಗುರುವಾರ ರಾತ್ರಿ ನಡೆಯುವ
ಶಬ್-ಎ-ಬರಾತ್ ಹಬ್ಬಕ್ಕೆ ಕರ್ನಾಟಕ ರಾಜ್ಯದ ಎಲ್ಲಾ ಮುಸ್ಲಿಂ
ಬಾಂಧವರಿಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್)
ಹಾಗೂ ಖಬರಸಾನ್ ಮತ್ತು ದರ್ಗಾಗಳಿಗೆ ಭೇಟಿ
ನೀಡುವುದನ್ನು ನಿಷೇಧಿಸಲಾಗಿರುತ್ತದೆ ಎಂದು ಜಿಲ್ಲಾ ವಕ್ಫ್
ಅಧಿಕಾರಿಯಾದ ಸೈಯದ್ ಮೊಅಜಂ ಪಾಷ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *