ದಾವಣಗೆರೆ, ಏ.10
ಕೋವಿಡ್-19 ವೈರಾಣು ಹರಡದಂತೆ ನಿಯಂತ್ರಣ ಮಾಡಲು
ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಚಿಲ್ಲರೆ ತರಕಾರಿ
ಮಾರಾಟವನ್ನು ನಿಷೇಧಿಸಿ, ತಳ್ಳುವ ಗಾಡಿ, ಆಪೇ ಆಟೋಗಳ
ಮೂಲಕ ಮನೆ ಮನೆಗೆ ಪೂರೈಸುತ್ತಿದ್ದು, ಎಪಿಎಂಸಿ
ನಿಗದಿಪಡಿಸಿದ ದರದಂತೆ ತರಕಾರಿ ಮಾರುವಂತೆ ತಿಳಿಸಲಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗುಂತೆ ತರಕಾರಿಗಳನ್ನು
ತಳ್ಳುವ ಗಾಡಿ, ಆಪೇ ಆಟೋಗಳ ಮೂಲಕ ತಮ್ಮ ತಮ್ಮ
ಮನೆ ಹತ್ತಿರವೇ ಪೂರೈಸಲು ಕ್ರಮಕೈಗೊಳ್ಳಲಾಗಿದ್ದು
ತರಕಾರಿಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ
ಬಗ್ಗೆ ದೂರುಗಳು ಬಂದಿರುವುದರಿಂದ ಸಹಾಯಕ
ಆಯುಕ್ತರು, ದಾವಣಗೆರೆ ಉಪ ವಿಭಾಗ ಆಯುಕ್ತರು,
ಮಹಾನಗರಪಾಲಿಕೆ ಕಾರ್ಯದರ್ಶಿ, ಹಾಗೂ ಕೃಷಿ ಉತ್ಪನ್ನ
ಮಾರುಕಟ್ಟೆ ಸಮಿತಿ ದಾವಣಗೆರೆ ಇವರ ಸಮ್ಮುಖದಲ್ಲಿ
ತಳ್ಳುಗಾಡಿ, ಆಪೇ ಆಟೋ ಸಂಘದವರೊಂದಿಗೆ ಸಭೆಯನ್ನು
ನಡೆಸಿ, ಮಹಾನಗರಪಾಲಿಕೆ ಹಾಗೂ ಕೃಷಿ ಉತ್ಪನ್ನ
ಮಾರುಕಟ್ಟೆ ಸಮಿತಿ ದಾವಣಗೆರೆಯಿಂದ ದಿನನಿತ್ಯ ಪ್ರಕಟಿಸುವ
ತರಕಾರಿಗಳ ಗರಿಷ್ಠ ದರಗಳಂತೆ ಮಾರಾಟ ಮಾಡಲು
ತೀರ್ಮಾನಿಸಲಾಗಿದೆ. ಗರಿಷ್ಠ ದರಗಳಿಂತ ಹೆಚ್ಚಿನ ದರಗಳಿಗೆ
ತರಕಾರಿ ಮಾರಾಟ ಮಾಡುವವರ ವಿರುದ್ದ ಸೂಕ್ತ ಕಾನೂನು
ಕ್ರಮ ಜರುಗಿಸಲಾಗುದು.
ಗರಿಷ್ಠ ದರಗಳಿಂತ ಹೆಚ್ಚಿನ ದರಗಳಿಗೆ ತರಕಾರಿ ಮಾರಾಟ
ಮಾಡಿದಲ್ಲಿ 1077 ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು
ನೀಡಬಹುದು ಎಂದು ಮಹಾನಹರಪಾಲಿಕೆ ಆಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ಹಿಮ್ಮೆಟ್ಟಿಸಲು ಉತ್ತಮ ಕ್ರಮ-ಮುಂದೆ
ಒಂದೂ ಪ್ರಕರಣ ದಾಖಲಾಗದಂತೆ ಕ್ರಮ ವಹಿಸಿ :

ಎಸ್.ಆರ್.ಉಮಾಶಂಕರ್

Leave a Reply

Your email address will not be published. Required fields are marked *