ದಾವಣಗೆರೆ: ಜಿಲ್ಲಾಡಳಿತದ ನೇತೃತ್ವದಲ್ಲಿ ನಾಗರೀಕರಿಗೆ
ಕೋಳಿಮೊಟ್ಟೆಗಳ ವಿತರಣೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಶಾಸಕರಾದ ಡಾ|| ಶಾಮನೂರ ಶಿವಶಂಕರಪ್ಪನವರು
ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಚಾಲನೆ
ನೀಡಿದರು.
ಇಂದು ಬೆಳಿಗ್ಗೆ ನಗರದ ಎಸ್‍ಪಿಎಸ್ ನಗರ ಮತ್ತು ಜಾಲಿ
ನಗರಗಳಲ್ಲಿ ಸಾಂಕೇತಿಕವಾಗಿ ಕೋಳಿಮೊಟ್ಟೆಗಳನ್ನು
ವಿತರಿಸಲಾಯಿತು.
ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ
ಮಾತನಾಡಿದ ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು ಕೊರೋನಾ ವೈರಸ್ ಭೀತಿಯಿಂದ
ನಾಗರೀಕರು ಆಹಾರ ಸೇವೆಯಲ್ಲಿ ಪೌಷ್ಟಿಕಾಂಶದ ಕೊರತೆ
ಕಾಣಬಾರದೆಂಬ ಸದುದ್ದೇಶದಿಂದ ಕೋಳೊಮೊಟ್ಟೆಗಳನ್ನು
ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾನಗರ ಪಾಲಿಕೆ, ಪಶುಪಾಲನಾ
ಮತ್ತು ವೈದ್ಯಕೀಯ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಕೋಳಿ
ಸಾಕಾಣಿಕೆದಾರರ ಸಂಘದವರ ಸಹಕಾರದೊಂದಿಗೆ ಈ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಾಗರೀಕರು
ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್
ಕೆ.ಶೆಟ್ಟಿ, ವಿರೋಧಪಕ್ಷದ ನಾಯಕ ಎ.ನಾಗರಾಜ್,
ಸದಸ್ಯರುಗಳಾದ ಶ್ರೀಮತಿ ಸುಧಾ ಇಟ್ಟಿಗುಡಿ, ವಿನಾಯಕ
ಪೈಲ್ವಾನ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಎನ್.ಚಂದ್ರಪ್ಪ
ಮತ್ತಿತರರಿದ್ದರು.

Leave a Reply

Your email address will not be published. Required fields are marked *