ಹೊನ್ನಾಳಿ ತಾಲೂಕಿನ ಟಿ.ಬಿ.ವೃತ್ತದಲ್ಲಿರುವ ತೋಟಗಾರಿಕೆ ಇಲಾಖೆಯ ಹಿಂಭಾಗ H.b ಗಿಡ್ಡಪ್ಪ ಬಡಾವಣೆಯಲ್ಲಿರುವ 40 ಕುಟುಂಬಗಳಿಗೆ ಮತ್ತು ತೋಟಗಾರಿಕೆ ಹಿಂಭಾಗ ಇರುವ ಯಾಲಕ್ಕಿ ಕೇರಿಯಲಿರುವ 20 ಕುಟುಂಬಗಳಿಗೆ ಹಾಗೂ ನಮ್ಮ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಮ್ಮ ಟಿ.ಬಿ ಸರ್ಕಲ್ ಗ್ರಾಮದಲ್ಲಿ ವಾಸವಾಗಿರುವ ಪೌರ ಕಾರ್ಮಿಕರ 20 ಕುಟುಂಬಗಳಿಗೆ ಮತ್ತು ನ್ಯಾಯ ಬೆಲೆ ಅಂಗಡಿಯ ಹಿಂಭಾಗದಲ್ಲಿ ಅನೇಕ ವರ್ಷಗಳಿಂದ ಗುಡಿಸಲನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ 25 ಕುಟುಂಬಗಳಿಗೆ ಹೆಚ್ಚು ಕಡಿಮೆ 105 ರಿಂದ 110 ಕುಟುಂಬಗಳಿಗೆ ಕರೋನ ವೈರಸ್ ವಿರುದ್ಧ ಜಾಗೃತಿ ಮೂಡಿಸಿ ಜೊತೆಗೆ ದಿನಸಿ ಸಾಮಾನುಗಳು ತರಕಾರಿ ಹಾಗೂ ಸಾಬೂನು ಕಿಟ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಎಂ ವಗರ್ ಅವರ ತಂದೆ ತಾಯಿಯಾದ ಟಿ.ಬಿ ಸರ್ಕಲ್ ವಾಸಿಯಾಗಿರುವ ವಿನಯ್ ಹೋಟೆಲ್ ಮಾಲೀಕರಾದ ಸೂರ್ಯಕಲಾ ಮಂಜಪ್ಪ ಅವರು ಕರ್ನಾಟಕ ರಕ್ಷಣಾ ವೇದಿಕೆ ಮುಖಾಂತರ ದಿನಸಿ ತರಕಾರಿ ಕಿಟ್ ನ್ನು ಕೊಡಿಸಿ ಆ ಭಾಗದ ಜನತೆಗೆ ತಾವು ಸ್ವಯಂ ಪ್ರೇರಿತರಾಗಿ ಬಂದು ಮನೆ ಮನೆಗೆ ತೆರಳಿ ವಿತರಿಸಿ ಸಹಾಯ ಹಸ್ತ ಚಾಚಿದರು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಎಂ. ವಗ್ಗರ್ .ತಾಲ್ಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಗಂಗಾಧರಪ್ಪ.ಪತ್ರಿಕಾ ವರದಿಗಾರರು ಮತ್ತು ಸಮಾಜ ಸೇವಕರಾದ ಯೋಗೇಶ್ ಅವರು ಮಾರ್ಸ್ ವಿತರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಕರವೇಯ ಗೌರವ ಅಧ್ಯಕ್ಷರಾದ ರಾಜು ಕಣಗಣ್ಣಾರ. ಕನ್ನಡ ಪರ ಸಂಘಟನೆಯ ಒಕ್ಕೂಟದ ಗೌರವ ಅಧ್ಯಕ್ಷರಾದ ಕತ್ತಿಗೆ ನಾಗರಾಜ್ ಪ್ರಜಾವಾಣಿ ಪತ್ರಿಕೆ ವರದಿಗಾರರಾದ ಆಂಜನೇಯ.ಕನ್ನಡ ಪ್ರಭ ವರದಿಗಾರರಾದ ರಾಜು.ಸಂಯುಕ್ತ ಕರ್ನಾಟಕ ವರದಿಗಾರರಾದ ಜಯಪ್ಪ.ಜನತಾವಾಣಿ ಪತ್ರಿಕೆಯ ವರದಿಗಾರರಾದ ಪಾಟೀಲ್.ಎಬಿಸಿ ನ್ಯೂಸ್ ವರದಿಗಾರರಾದ ಅರವಿಂದ್ ಹೀಗೆ ಪತ್ರಿಕೆ ವರದಿಗಾರರ ಮೂಲಕ ಕೆಲವು ಬಡ ಕುಟುಂಬಗಳಿಗೆ ಅವರ ಹಸ್ತದಿಂದ ವಿತರಿಸಿದರು ಹಾಗೂ
ಸರ್ಕಾರಿ ಶಾಲೆಯ ಶಿಕ್ಷಕಿ ಎಸ್ ಎಸ್ ಮಜಲ್ ಉಚಿತ ಪಾಠ ಶಾಲೆಯ ಸಂಸ್ಥಾಪಕಿ
ಷಹಜಾನ್. ಆಶಾ ಕಾರ್ಯಕರ್ತೆಯರಾದ ಲತಾ.ಚೇತನ. ಸಂಶಾದ್ ಇವರು ಕೂಡ ಅನೇಕ ಬಡ ಕುಟುಂಬಗಳಿಗೆ ತಮ್ಮ ಅಭಯ ಹಸ್ತದಿಂದ ವಿತರಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಕರವೇ ತಾಲ್ಲೂಕು ಉಪಾಧ್ಯಕ್ಷರಾದ ಸಂತೋಷ್ ಗ್ರಾಮ ಘಟಕದ ಅಧ್ಯಕ್ಷ ದಯಾನಂದ್.ನಗರ ಘಟಕದ ಅಧ್ಯಕ್ಷ ಹಳದಪ್ಪ.ಉಪಾಧ್ಯಕ್ಷ ಬಾಡಿ ಬಿಲ್ಡರ್ ನಾಗರಾಜ್.ಯುವ ಘಟಕದ ಉಪಾಧ್ಯಕ್ಷ ಮುನ್ನಾ ಪೈಲ್ವಾನ್.ಪ್ರವೀಣ್ ಬೀರಣ್ಣರ್.ಬಡಾವಣೆ ರವಿ.ಐಟಿ ಘಟಕದ ಅಣ್ಣಪ್ಪ ಹೊಳೆಹರಳಹಳ್ಳಿ ಕರವೇಯ ಹಿತೈಷಿಗಳಾದ ಕುಮಾರ್.ಮಂಜುನಾಥ ಫರ್ನಿಚರ್ಸ್ ಮಾಲೀಕರಾದ ರಾಘವೇಂದ್ರ.ಮಂಜು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.