ಕರೋನಾ ಎಂಬ ಸಾಂಕ್ರಾಮಿಕ ರೋಗದಿಂದ ಇಡೀ ದೇಶವೇ
ಲಾಕ್ ಡೌನ್ ಆಗಿದೆ. ಅಂದೇ ದುಡಿದು ಅಂದೇ ಊಟ ಮಾಡುವ
ಕೋಟ್ಯಾಂತರ ಬಡವರು, ಕೂಲಿ ಕಾರ್ಮಿಕರು ಬೀದಿಗೆ
ಬಿದ್ದಿದ್ದಾರೆ. ಇದಕ್ಕೆ ನಮ್ಮ ದಾವಣಗೆರೆ ಕೂಡ ಹೊರತಾಗಿಲ್ಲ.
ದಾವಣಗೆರೆ ನಗರವೂ ಸಹ ಲಾಕ್ ಡೌನ್ ಆಗಿ 20
ದಿನಗಳಾಗುತ್ತಾ ಬಂದಿದೆ. ಹಣ ಇದ್ದವರು, ಶ್ರೀಮಂತರು,
ಆಹಾರ ದಿನಸಿ ವಸ್ತುಗಳನ್ನು ದಾಸ್ತಾನು ಮಾಡಿಕೊಂಡು
ಜೀವನ ಸಾಗಿಸುತ್ತಿದ್ದಾರೆ.ಆದರೆ ಬಡವರು, ನಿರ್ಗತಿಕರು
ಬೀದಿಗೆ ಬಿದ್ದಿದ್ದಾರೆ. ಕೈಗಾಡಿ ಎಳೆಯುವವರು, ಆಟೋ
ಚಾಲಕರು, ಹಮಾಲರು. ಕಟ್ಟಡ ಕಾರ್ಮಿಕರು, ಸವಿತಾ
ಸಮಾಜದವರು, ಇಸ್ತ್ರೀ ಮಾಡುವವರು, ಪುಟ್‍ಪಾತ್
ವ್ಯಾಪಾರಿಗಳು, ಅಸಂಘಟಿತ ಕೂಲಿ ಕಾರ್ಮಿಕರು, ಊಟಕ್ಕೆ ದಿನಸಿ
ವಸ್ತುಗಳಿಲ್ಲದೇ ಪರದಾಡುತ್ತಿದ್ದಾರೆ. ಇವರೆಲ್ಲ ದುಡಿದು
ತಿನ್ನಬೇಕೆ ಹೊರತು ಮನೆಯಲ್ಲಿ ಕೂತರೆ ಹೊಟ್ಟೆ
ತುಂಬುವುದಿಲ್ಲ. ಬಿ.ಪಿ.ಎಲ್ ಕಾರ್ಡುದಾರರಿಗೆ ಕೇವಲ ಅಕ್ಕಿ,
ಗೋಧಿ ನೀಡಿದರೆ ಜೀವನ ನಡೆಸುವುದು ಕಷ್ಟ. ಇಂತಹ
ಸಂದರ್ಭದಲ್ಲಿ ಈ ಜನರ ನೆರವಿಗೆ ಬರಬೇಕಾದ ದಾವಣಗೆರೆ
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಂಪೂರ್ಣ ನಿರ್ಲಕ್ಷ್ಯ
ವಹಿಸಿದೆ.
ಎಲ್ಲಾ ವಾರ್ಡ್‍ಗಳ ಮಹಾನಗರ ಪಾಲಿಕೆ ಸದಸ್ಯರು
ಮಹಾಪೌರರಲ್ಲಿ ಹಾಗೂ ಜಿಲ್ಲಾಡಳಿತದಲ್ಲಿ ಎಷ್ಟೇ ಮನವಿ
ಸಲ್ಲಿಸಿದರೂ ಸಹ ಸ್ಫಂದಿಸದೇ ಯಾವದೋ ಸಂಘ-
ಸಂಸ್ಥೆಗಳು ನೀಡುವ ಆಹಾರ ಸಾಮಾಗ್ರಿಗಳ ವಿತರಣಾ

ಕಾರ್ಯಕ್ರಮಗಳಲ್ಲಿ ಬಿಟ್ಟಿ ಪ್ರಚಾರ
ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತವಾಗಲೀ,
ಪಾಲಿಕೆಯಾಗಲೀ ಬಡವರಿಗೆ ಯಾವುದೇ ನೆರವನ್ನು
ನೀಡದೇ ಇರುವುದು ನಾಚಿಕೆಗೇಡು.
ಪಾಲಿಕೆ ವ್ಯಾಪ್ತಿಯ ಒಂದೊಂದು ವಾರ್ಡ್‍ನಲ್ಲೂ ಕನಿಷ್ಠ 1000
ದಿಂದ 1500 ಸಾವಿರ ಬಡವರಿದ್ದು, ಇವರಿಗೆ ಬಡವರ ಬಗ್ಗೆ ಕಾಳಜಿ
ಇದ್ದರೆ ಈ ಕೂಡಲೇ ದಿನಸಿ ಕಿಟ್‍ಗಳನ್ನು ಪ್ರತಿ ವಾರ್ಡ್‍ಗೆ
ಒಂದು ಸಾವಿರದಂತೆ ವಿತರಣೆ ಮಾಡಲಿ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ
ಪ್ರತಿವಾರ್ಡ್‍ಗೂ ಕರೋನಾ ವಿಷಯಕ್ಕೆ ಸಂಬಂಧಿಸಿದಂತೆ 25
ಲಕ್ಷ ರೂ.ಗಳ ಹಣವನ್ನು ಬಿಡುಗಡೆ ಮಾಡಲಾಗಿದೆ.
ಹಾಗೂ ಪ್ರತಿ ವಾರ್ಡ್‍ಗೂ 5 ಸಾವಿರ ಆಹಾರ ಕಿಟ್‍ಗಳನ್ನು
ನೀಡಲು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ದಾವಣಗೆರೆ
ಮಹಾನಗರ ಪಾಲಿಕೆಯಿಂದ ಕನಿಷ್ಠ 10 ಲಕ್ಷ
ರೂ.ಗಳನ್ನಾದರೂ ಬಿಡುಗಡೆ ಮಾಡಲಿ,
ಬೆಂಗಳೂರುನಲ್ಲಿ ಬಿಡುಗಡೆ ಮಾಡಿರುವುದು ಇಲ್ಲಿ
ನಿಮಗೇಕೆ ಸಾಧ್ಯವಾಗುತ್ತಿಲ್ಲ. ಮೇಯರ್
ಅಧಿಕಾರದಲ್ಲಿರುವ ನೀವು ಎಲ್ಲಿಂದಾದರೂ ಹಣ ತನ್ನಿ ನಿಮ್ಮದೇ
ರಾಜ್ಯ, ಕೇಂದ್ರ ಸರ್ಕಾರಗಳು ಅಧಿಕಾರದಲ್ಲಿದೆ. ನಿಮ್ಮ
ಪಕ್ಷದವರೇ ಲೋಕಸಭಾ ಮತ್ತು ವಿಧಾನಸಭಾ
ಸದಸ್ಯರಿದ್ದಾರೆ. ಎಲ್ಲಿದ್ದಾಂದರೂ ಹಣ ತಂದು 45 ಸಾವಿರ ದಿನಸಿ
ಕಿಟ್‍ಗಳನ್ನು ವಿತರಿಸಿ ಈ ಕೆಲಸ ನಿಮ್ಮಿಂದ ಆಗದೇ ಇದ್ದರೆ
ರಾಜೀನಾಮೆ ಕೊಟ್ಟು ಮನೆಗೆ ಹೋಗಿ
ಮಾನ್ಯ ಜಿಲ್ಲಾಧಿಕಾರಿಗಳಿಗೆ ದಾನಿಗಳು ಲಕ್ಷಾಂತರ
ರೂ.ಗಳನ್ನು ದಾನ ನೀಡಿದ್ದಾರೆ. ರಾಜ್ಯ-ಕೇಂದ್ರ ಸರ್ಕಾರದ
ಹಣವೂ ಬಿಡುಗಡೆ ಆಗಿದೆ.ಇದೆಲ್ಲವನ್ನು ಇಟ್ಟು ಏನು
ಮಾಡುತ್ತಿರಿ. ಬಡ ಜನರಿಗೆ ನೀವು ಸಿಗುವುದಿಲ್ಲ. ಸ್ಥಳೀಯ
ವಾರ್ಡ್ ಸದಸ್ಯರು ಮಾತ್ರ ಸಿಗುತ್ತಾರೆ. ಇಂತಹ

ಪರಿಸ್ಥಿತಿಗಳಲ್ಲಿ ಬಡವರಿಗೆ ನಾವು ಊಟ ಕೊಡದಿದ್ದರೆ
ಸರ್ಕಾರಗಳಿದ್ದು ಏನು ಪ್ರಯೋಜನ
ಬಡವರು ಹಸಿವಿನಿಂದ ಸಾಯುತ್ತಿದ್ದಾಗ ಬಿಟ್ಟಿ ಪ್ರಚಾರ
ನಮಗೇಕೆ ಬೇಕು. ಈ ಕೂಡಲೇ 45 ವಾರ್ಡ್‍ನಲ್ಲೂ ಗಂಜಿ
ಕೇಂದ್ರಗಳನ್ನು ಪ್ರಾರಂಭಿಸಿ ಹಸಿದ ಬಡವರಿಗೆ ಸಾಮಾಜಿಕ
ಅಂತರ ಕಾಪಾಡಿಕೊಂಡು ಊಟ ಕೊಡುವಂತಹ ಕೆಲಸ ಮಾಡಿ
ದಾವಣಗೆರೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ
ಯಾವುದೇ ಕಾಯ್ದೆ- ಕಾನೂನು ನೆಪ ಹೇಳದೇ ಆಹಾರ
ಸಾಮಾಗ್ರಿಗಳ ಕಿಟ್‍ಗಳನ್ನು ನೀಡಬೇಕು. ಇಲ್ಲದಿದ್ದರೆ
ಮಹಾಪೌರರ ಕಛೇರಿಗೆ ಬೀಗ ಹಾಕಿ
ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡುತ್ತೇವೆ.

Leave a Reply

Your email address will not be published. Required fields are marked *