ದಾವಣಗೆರೆ ಏ.10
ಹರಿಹರ ತಾಲ್ಲೂಕಿನ ಗುತ್ತೂರು ಬಳಿಯ ಬಿಎಸ್‍ಎಂ ಬ್ರಿಕ್
ಫ್ಯಾಕ್ಟರಿಯಲ್ಲಿ ಕಾರ್ಮಿಕರು ಅಶುದ್ದವಾದ ನದಿ ನೀರನ್ನು
ಸೇವಿಸಿರುವುದರಿಂದ ಕೆಲವರಲ್ಲಿ ವಾಂತಿ, ಬೇಧಿ ಹಾಗೂ

ಹೊಟ್ಟೆನೋವು ಕಾಣಿಸಿಕೊಂಡಿದ್ದು ಇಂದು ಜಿಲ್ಲಾ ಸರ್ವೇಕ್ಷಣಾ
ಘಟಕ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿತು.
      ಬಿಎಸ್‍ಎಂ ಫ್ಯಾಕ್ಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 46
ಕಾರ್ಮಿಕರ ಪೈಕಿ 9 ಜನ ಕಾರ್ಮಿಕರು ತ್ರೀವ್ರತರನಾದ
ಗ್ಯಾಸ್ಟ್ರೋಎಂಟರೈಟಿಸ್‍ನಿಂದ ಬಳಲುತ್ತಿರುವುದು ಕಂಡು
ಬಂದಿದ್ದು ಅವರಲ್ಲಿ ಒಬ್ಬ (1) ರೋಗಿಯನ್ನು ದಾವಣಗೆರೆಯ
ಚಿಗಟೇರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. 4
ರೋಗಿಗಳನ್ನು ಹರಿಹರದ ಸರ್ಕಾರಿ ಆಸ್ಪತ್ರೆ ಇಲ್ಲಿ
ದಾಖಲಿಸಲಾಗಿದ್ದು, ಉಳಿದ 4 ರೋಗಿಗಳಲ್ಲಿ ಹೆಚ್ಚಿನ
ತೊಂದರೆಯಿಲ್ಲದಿರುವುದರಿಂದ  ಚಿಕಿತ್ಸೆ ನೀಡಿ ಫ್ಯಾಕ್ಟರಿಗೆ
ಕಳುಹಿಸಿಕೊಡಲಾಗಿದೆ. ಉಳಿದ ಕಾರ್ಮಿಕರ ಆರೋಗ್ಯ
ತಪಾಸಣೆಯನ್ನು ಸಹ ನಡೆಸಲಾಗಿದ್ದು ಇವರಿಗೆ ಸಹ
ಯಾವುದೇ ತೊಂದರೆಯಿರುವುದಿಲ್ಲ.
ಅಶುದ್ದವಾದ ನದಿ ನೀರನ್ನು ಕಾರ್ಮಿಕರು
ಸೇವಿಸಿರುವುದರಿಂದ ಕೆಲವರಲ್ಲಿ ವಾಂತಿ, ಬೇದಿ ಹಾಗೂ
ಹೊಟ್ಟೆನೋವು ಕಾಣಿಸಿಕೊಂಡಿದೆ. ನೀರು ಮತ್ತು
ಅಸ್ವಸ್ಥಗೊಂಡ 5 ಜನರ ಮಲವನ್ನು ಡಿಪಿಹೆಚ್‍ಎಲ್‍ಗೆ ಪರೀಕ್ಷೆಗಾಗಿ
ಕಳುಹಿಸಲಾಗಿದೆ. ಈ ಕುರಿತು ಫ್ಯಾಕ್ಟರಿ ಮಾಲೀಕರ ಸಂಬಂಧಿಸಿದ
ಹಾಗೂ ಪಿಡಿಓ ಗಮನಕ್ಕೆ ತಂದು ಶುದ್ದ ಕುಡಿಯುವ
ನೀರನ್ನು ಒದಗಿಸುವಂತೆ ತಿಳಿಸಲಾಯಿತು ಎಂದು ಜಿಲ್ಲಾ
ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ತಿಳಿಸಿದ್ದಾರೆ.
ಈ ಸಮಯದಲ್ಲಿ ಡಾ. ಕೆ.ಹೆಚ್ ಯತೀಶ್, ಹಿರಿಯ ಆರೋಗ್ಯ
ನಿರೀಕ್ಷಕ ಹೊರಾಕೇರಿ ಹಾಗೂ ಲೋಕೇಶ್ ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ದಾವಣಗೆರೆ ಏ.10 (ಕರ್ನಾಟಕ ವಾರ್ತೆ)-
ನಗರಾಭಿವೃದ್ದಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ. ಬಸವರಾಜ ಇವರು ಏ.13 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಏ.13 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ
ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ನಿಯಂತ್ರಣದ ಕುರಿತು
ಕೈಗೊಳ್ಳಲಾಗಿರುವ ಕ್ರಮಗಳ ಕುರಿತು
ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆಯಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ
ನಡೆಸುವರು.
ಮಧ್ಯಾಹ್ನ 3 ಗಂಟೆಗೆ ಉಚಿತ ಪಡಿತರ ವಿತರಣೆ,
ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಣೆ ಹಾಗೂ ಜಿಲ್ಲೆಗೆ
ಸಂಬಂಧಿಸಿದ ಇತರೆ ಪ್ರಮುಖ ವಿಷಯಗಳ ಕುರಿತು
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆಯಲ್ಲಿ
 ಪಾಲ್ಗೊಳ್ಳುವರು. ಸಂಜೆ 4.30 ಗಂಟೆಗೆ ದಾವಣಗೆರೆಯಿಂದ
ತೆರಳಿ ಬೆಂಗಳೂರು ತಲುಪಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *