ದಾವಣಗೆರೆ, ಏ.11
ಕೋವಿಡ್ – 19 ಹರಡುವಿಕೆಯನ್ನು ನಿಯಂತ್ರಿಸುವ
ಸಲುವಾಗಿ ಘೋಷಿಸಲಾಗಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಇಂದು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ
ಆಯುಕ್ತರಾದ ಸಿದ್ದರಾಮಪ್ಪ ಇವರು ದಾವಣಗೆರೆ ವಾರ್ತಾ
ಇಲಾಖೆ ಕಚೇರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆ, ಕಾರ್ಮಿಕ ಇಲಾಖೆ ಮತ್ತು ರೆಡ್ಕ್ರಾಸ್ ವತಿಯಿಂದ
ನೋಂದಾಯಿಸಿಕೊಳ್ಳಲಾಗಿರುವ ಕೋವಿಡ್ ಸ್ವಯಂ ಸೇವಕರ
ಸಭೆ ನಡೆಸಿ, ಸ್ವಯಂ ಸೇವಕರು ರೆಡ್ಕ್ರಾಸ್ ವಾರ್ತಾ ಮತ್ತು
ಕಾರ್ಮಿಕ ಇಲಾಖೆಗಳೊಂದಿಗೆ ಸಮನ್ವಯದಿಂದ ಹೇಗೆ
ಕಾರ್ಯ ನಿರ್ವಹಿಸಬೇಕೆಂದು ಸೂಚನೆಗಳನ್ನು ನೀಡಿದರು. ಈ
ವೇಳೆ ವಾರ್ತಾಧಿಕಾರಿ ಅಶೋಕ್ಕುಮಾರ್.ಡಿ, ರೆಡ್ಕ್ರಾಸ್
ಕಾರ್ಯದರ್ಶಿ ಅನಿಲ್ ಬಾರಂಗಳ್, ಕೋವಿಡ್ ಸ್ವಯಂಸೇವಕರು
ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.