ದಾವಣಗೆರೆ, ಏ.10
ದಾವಣಗೆರೆ ಜಿಲ್ಲೆಯ 108 ತುರ್ತು ವಾಹನಗಳ
ದುರಸ್ತಿಗಳನ್ನು ಮಾಡಿಸಲು ಕೋವಿಡ್ – 19 ಲಾಕ್‍ಡೌನ್ ಹಿನ್ನೆಲೆ
ಇರುವುದರಿಂದ ಎಲ್ಲಾ ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್
ಮುಚ್ಚಿರುವ ಪ್ರಯುಕ್ತ ವಾಹನಗಳನ್ನು ದುರಸ್ತಿ
ಮಾಡಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ಈ ಕೆಳಕಂಡ
ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್ ತೆರೆಯಲು
ಜಿಲ್ಲಾಧಿಕಾರಿಗಳು ಕೆಲವು ಷರತ್ತಿಗೆ ಒಳಪಟ್ಟು ಅನುಮತಿ
ನೀಡಿದ್ದಾರೆ.
ಮಹಾಲಕ್ಷ್ಮಿ ಆಟೋಮೊಬೈಲ್ಸ್, ಹರಿಹರ ರಸ್ತೆ, ದಾವಣಗೆರೆ.
ಎಸ್.ಎಸ್.ಕೆ.ಗ್ಯಾರೇಜ್, ಹರಿಹರ ರಸ್ತೆ ದಾವಣಗೆರೆ. ಮೆ||
ಮಲ್ಲಿಕಾರ್ಜುನ ಸೇಲ್ಸ್ &ಚಿmಠಿ; ಸರ್ವಿಸ್, ಪಿ.ಬಿ.ರಸ್ತೆ, ದಾವಣಗೆರೆ, ಲಕ್ಷ್ಮೀ
ಪಂಚರ್ ಶಾಪ್, ಶಾಮನೂರು ರಸ್ತೆ, ದಾವಣಗೆರೆ. ಇದಾಯತ್
ಗ್ಯಾರೇಜ್, ಹರಿಹರ ರಸ್ತೆ, ದಾವಣಗೆರೆ. ಸದರನ್ ಗ್ಯಾಸ್ ಏಜೆನ್ಸಿ,
ಹರಿಹರ ಈ ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್‍ಗಳನ್ನು
ತೆರೆಯಲು ಅನುಮತಿ ನೀಡಲಾಗಿದೆ.
ಷರತ್ತುಗಳು : ಪರಿಶುದ್ದತೆ, ನೈರ್ಮಲ್ಯ, ಅಗತ್ಯ
ಸುರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ
ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರುತ್ತದೆ. ಮತ್ತು ಕೆಲಸ
ನಿರ್ವಹಿಸುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್‍ಗಳನ್ನು
ಧರಿಸತಕ್ಕದ್ದು ಹಾಗೂ ಸಾಮಾಜಿಕ ಅಂತರ
ಕಾಪಾಡಿಕೊಳ್ಳತಕ್ಕದ್ದು.
ಮಾಲೀಕರುಗಳು ಸೇರಿದಂತೆ ಆಟೋಮೊಬೈಲ್/ಗ್ಯಾರೇಜ್
ಕೆಲಸಗಾರರಿಗೆ ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡುಬಂದಲ್ಲಿ
ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸಬೇಕು. ಕುಡಿಯಲು ಬಿಸಿ
ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳಲ್ಲಿ
ಸ್ಯಾನಿಟೈಸರ್/ಸೋಪ್ ವ್ಯವಸ್ಥೆ ಮಾಡಬೇಕು.
ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸುವವರ ಮೇಲೆ
ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು ವಿಪತ್ತು
ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರವರೆಗೆ

ಕಾನೂನುಗಳನ್ವಯ ಕ್ರಮ ಜರುಗಿಸಲಾಗುವುದೆಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ

ತಪಾಸಣಾ ವರದಿ

ಕೊರೊನಾ ಸೋಂಕು: ಖಚಿತಪಟ್ಟ ಮೂವರಲ್ಲಿ
ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ

ಬಿಡುಗಡೆ

      ಇಲ್ಲಿಯವರೆಗೆ ಭಾರತವೂ ಸೇರಿದಂತೆ 117
ದೇಶ/ಪ್ರದೇಶಗಳನ್ನು ಬಾಧಿಸಿರುವ ಇತ್ತೀಚಿನ ನೋವೆಲ್
ಕೊರೊನಾ ವೈರಸ್ (ಛಿoviಜ-19)ನ್ನು 2020 ರ ಜನವರಿ 30 ರಂದು
ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು
ಪರಿಸ್ಥಿತಿ (PಊಇIಅ) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.
    ವಿಶ್ವ ಆರೋಗ್ಯ ಸಂಸ್ಥೆಯು 2020 ರ ಮಾರ್ಚ್ 11 ರಂದು
ಕೋವಿಡ್-19 ನ್ನು ಸರ್ವವ್ಯಾಪಿ ರೋಗ ಎಂದು ನಿರೂಪಿಸಿದೆ.  ಈ
ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯು ರೋಗ ತಡೆಗಟ್ಟುವ
ಕ್ರಮಗಳನ್ನು ಎಲ್ಲ ರೀತಿಯ ಸರ್ವೇಕ್ಷಣೆಯನ್ನು
ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು
ಬಲಪಡಿಸಿದೆ.
ಜಿಲ್ಲೆಯಿಂದ ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ
ತಪಾಸಣಾ ವರದಿ: ಮಾರ್ಚ್ 04 ರಿಂದ ಇಲ್ಲಿಯವರೆಗೆ

ಸಂಗ್ರಹ ವರದಿ 10.04.2020


್ರ.¸
Àಂ
ಚಟುವಟಿಕೆ ಈ
ದಿನ
ಸಂಚಿ

1 ಅವಲೋಕನೆಗಾಗಿ ಪಟ್ಟಿ ಮಾಡಲ್ಪಟ್ಟವರು 03 389
2 28 ದಿನಗಳ ಅವಲೋಕನ ಅವಧಿಯನ್ನು
ಪೂರ್ಣಗೊಳಿಸಿದವರು

21 189

3 14 ದಿನಗಳ ಅವಲೋಕನ ಅವಧಿಯನ್ನು
ಪೂರ್ಣಗೊಳಿಸಿದವರು

00 170
4 ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟವರು 00 19
5 ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟವರು 03 45
6 ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 00 38
7 ನಮ್ಮ ಜಿಲ್ಲೆಯಿಂದ ಹೊರ ದೇಶಗಳಿಗೆ
ಹೋದವರು (ಅಲ್ಲಿಯೇ ನೆಲೆಸಿರುವವರು)

00 10
8 ನಮ್ಮ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ 00 17

ಹೋದವರು (ಬೇರೆ ದೇಶಕ್ಕೆ ಹೋಗಿ ಬಂದವರು)
9 ಪರೀಕ್ಷೆ ಮಾಡಲು ಸಂಗ್ರಹಿಸಲಾದ ಒಟ್ಟು
ಮಾದರಿಗಳು

46 118

10 ನೆಗೆಟಿವ್ ಎಂದು ವರದಿಯಾದ ಒಟ್ಟು
ಫಲಿತಾಂಶಗಳು

00 67
11 ಖಚಿತಪಟ್ಟ ಫಲಿತಾಂಶಗಳು 00 03
12 ಖಚಿತಪಟ್ಟ ಮೂರು ಪ್ರಕರಣಗಳಲ್ಲಿ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು

00 03

13 ಜಿಲ್ಲೆಯಲ್ಲಿ ದಾಖಲಾದ ಒಟ್ಟು ಕೊವಿಡ್-19
ಪ್ರಕರಣಗಳು

00 03

14 ಜಿಲ್ಲೆಯಲ್ಲಿ ಹಾಲಿ ಇರುವ ಒಟ್ಟು ಕೋವಿಡ್-19
ಪ್ರಕರಣಗಳು

00 00

2020 ರ ಮಾರ್ಚ್ 04 ರಿಂದ ಇದುವರೆಗೆ 389ಜನರು ಜಿಲ್ಲೆಯಿಂದ
ವಿದೇಶ ಪ್ರಯಾಣ ಮಾಡಿ ಬಂದಿದ್ದು, 28 ದಿನಗಳ ಅವಲೋಕನ
ಅವಧಿಯನ್ನು 189 ಜನರು ಪೂರ್ಣಗೊಳಿಸಿದ್ದಾರೆ. ಹಾಗೂ 170
ಜನರು 14 ದಿನಗಳ ಅವಲೋಕನ ಅವಧಿಯನ್ನು
ಪೂರ್ಣಗೊಳಿಸಿದ್ದಾರೆ. ಒಟ್ಟು 19 ಜನರನ್ನು ಮನೆಯಲ್ಲೇ
ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, 45 ಜನರನ್ನು ಆಸ್ಪತ್ರೆಯಲ್ಲಿ
ಪ್ರತ್ಯೇಕವಾಗಿ ಇರಿಸಲಾಗಿದೆ. ಹಾಗೂ ಇದುವರೆಗೂ 38 ಜನರು
ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ
ಹೊಂದಿದ್ದಾರೆ.
     ಹೊರದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಿದೇಶಿಗರು
ಜಿಲ್ಲೆಗೆ ಬಂದು ಮತ್ತೆ ಹೊರದೇಶಗಳಿಗೆ ಇದುವರೆಗೆ 10
ಜನರು ತೆರಳಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ ನಮ್ಮ ಜಿಲ್ಲೆಗೆ
ಬಂದು ಇತರೆ ಜಿಲ್ಲೆಗಳಿಗೆ ಇದುವರೆಗೆ 17 ಜನ
ತೆರಳಿರುತ್ತಾರೆ. ಕೊರೋನಾ ವೈರಸ್ ಪರೀಕ್ಷೆಗಾಗಿ 118
ಮಾದರಿಗಳನ್ನು ಇದುವರೆಗೆ ಕಳುಹಿಸಲಾಗಿದ್ದು, 67
ಮಾದರಿಗಳು ನೆಗೆಟಿವ್ ಎಂದು ಫಲಿತಾಂಶ ಬಂದಿರುತ್ತದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಖಚಿತಪಟ್ಟ
ಮೂರು (03) ಪ್ರಕರಣಗಳ ಪೈಕಿ ಮೂವರೂ
ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇಂದಿನ ವಿಷಯಗಳು :

 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ
ಅಧ್ಯಕ್ಷತೆಯಲ್ಲಿ ಕೋವಿಡ್-19 ರ ಕುರಿತು

ಜಿಲ್ಲಾಡಳಿತದ ತುಂಗಾಭದ್ರಾ ಸಭಾಂಗಣದಲ್ಲಿ ಪ್ರಗತಿ
ಪರಿಶಿಲನಾ ಸಭೆ ನಡೆಸಲಾಯಿತು.
 ಖಚಿತಪಟ್ಟ ಪ್ರಕರಣಗಳು ಬಂದಿರುವ 2 ಎಪಿಸೆಂಟರ್‍ನ
ಕಂಟೈನ್‍ಮೆಂಟ್ ಝೋನ್‍ನಲ್ಲಿ ಈ ದಿನ 1196
ಮನೆಗಳಿಂದ 4829 ಜನರನ್ನು ಸಂದರ್ಶಸಿ ಫ್ಲೂ
ಸಮೀಕ್ಷೆಯನ್ನು ಆರೋಗ್ಯ ಸಹಾಯಕರು
ಮತ್ತು ಆಶಾ
ಕಾರ್ಯಕರ್ತೆರುಗಳನ್ನೊಳಗೊಂಡ 28
ತಂಡಗಳಿಂದ ನಡೆಸಲಾಯಿತು. ಈ ದಿನ ಲಕ್ಷಣಗಳು
ಇರುವ ಯಾವುದೇ ವ್ಯಕ್ತಿಗಳು ಇರುವುದಿಲ್ಲ.
ಸಂಚಿತ ಮನೆಗಳು 13397, ಜನಸಂಖ್ಯೆ 53752,
ಲಕ್ಷಣಗಳು ಇರುವ ವ್ಯಕ್ತಿಗಳು 24,
ಗುಣಮುಖರಾದವರು 24.
 ಎಲ್ಲಾ ಪ್ರಾ.ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ
ಇಲಾಖೆ ಸಿಬ್ಬಂದಿಯವರು ಕೋವಿಡ್-19 ಕುರಿತು
ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿಯನ್ನು
ನೀಡಲಾಗುತ್ತಿದೆ ಮತ್ತು ತಮ್ಮವ್ಯಾಪ್ತಿಯಲ್ಲಿ
ಬಂದಿರುವ ವಲಸಿಗರ ಆರೋಗ್ಯ ತಪಾಸಣೆಯನ್ನು
ಮಾಡುತ್ತಿದ್ದಾರೆ.
 ಜಿಲ್ಲೆಯ 4 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 5
ಐಸೋಲೆಷನ್ ಬೆಡ್‍ಗಳನ್ನು ಸ್ಥಾಪಿಲಾಗಿದೆ ಹಾಗೂ
ಜ್ವರದ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗಿದೆ.

ಸಾರ್ವಜನಿಕರಿಗೆ ಮನವಿ: ಕೋವಿಡ್-19 ಪೀಡಿತ ಪ್ರದೇಶಗಳಿಂದ
ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ
ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ
ದಿನದಿಂದ 14 ದಿನಗಳವರೆಗೆ, ರೋಗ ಲಕ್ಷಣಗಳು ಇರಲಿ
ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು.
ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ
ಮಾಡಿಕೊಳ್ಳಬೇಕು. ಅಥವಾ 104 ಸಹಾಯವಾಣಿಗೆ ಕರೆ
ಮಾಡುವುದು. ವೈಯುಕ್ತಿಕ ಸ್ವಚ್ಚತೆಯನ್ನು
ಕಾಪಾಡಿಕೊಳ್ಳುವುದು. ಕೆಮ್ಮುವಾಗ ಅಥವಾ ಸೀನುವಾಗ
ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ, ಕೈ
ಸಚ್ಚಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು
ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು
ಮತ್ತು ಸಾಮಾಜಿಕ ಸಮೂಹ ಗುಂಪು
ಸೇರುವಿಕೆಯನ್ನು ಮಾಡಬಾರದು.

Leave a Reply

Your email address will not be published. Required fields are marked *