ದಾವಣಗೆರೆ: ಕೋವಿಡ್-19 ಮಹಾಮಾರಿ ಇದೀಗ ದೇಶವನ್ನೇ
ತಲ್ಲಣಗೊಳಿಸುತ್ತಿದ್ದು, ವಿಶ್ವದ ಸುಮಾರು ಇನ್ನೂರಕ್ಕೂ
ಹೆಚ್ಚು ದೇಶಗಳನ್ನು ಬೆಂಬಿಡದೇ ಪೀಡಿಸುತ್ತಿದೆ.
ವಿದ್ಯಾರ್ಥಿಗಳು ಜ್ಞಾನ್ವೇಷಣೆಗೆ ಪರದಾಡುವಂತಾಗಿದೆ.
ತರಗತಿಗಳಿಲ್ಲದೇ ಆತಂಕಗೊಂಡಿರುವ ವಿದ್ಯಾರ್ಥಿಗಳಿಗೆ
ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಬಾಪೂಜಿ
ವಿದ್ಯಾಸಂಸ್ಥೆ ವತಿಯಿಂದ ದಾವಣಗೆರೆ ನಗರದಲ್ಲಿ
ನಡೆಯುತ್ತಿರುವ ಬಾಪೂಜಿ ಇಂಜಿನಿಯರಿಂಗ್ ಮತ್ತು
ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ||
ಹೆಚ್.ಬಿ.ಅರವಿಂದ್ ಅವರು ಆನ್‍ಲೈನ್ ತರಗತಿಗಳನ್ನು
ನೀಡುವ ವಿನೂತನ ಕ್ರಮ ಅನುಸರಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಈ ವಿನೂತನ
ಕ್ರಮದಡಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೇ
ಕುಳಿತು ಪಾಠವನ್ನು ಕೇಳುವ ಅವಕಾಶವನ್ನು
ಕಲ್ಪಿಸಿದ್ದಾರೆ.
ಆನ್‍ಲೈನ್ ತರಗತಿಗೆಂದೇ ಸುಮಾರು 70 ಲಕ್ಷ ವೆಚ್ಚದಲ್ಲಿ
ಇಂಪಾರ್‍ಟಸ್ ಎನ್ನುವ ತಂತ್ರಾಂಶವನ್ನು ಅವಶ್ಯವಿರುವ
ಪರಿಕರಗಳೊಂದಿಗೆ ಕಾಲೇಜಿನಲ್ಲಿ ಅಳವಡಿಸಲಾಗಿದ್ದು,
ಇದರ ಮೂಲಕ ವೇಳಾಪಟ್ಟಿಯಂತೆ ತರಗತಿಗಳು
ಚಾಲ್ತಿಯಲಿರಲಿವೆ.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೇ ಕುಳಿತು
ಪಾಠವನ್ನು ಕೇಳುವ ಜೊತೆಗೆ ಶಿಕ್ಷಕರೊಂದಿಗೆ
ಸಂವಾದ ನಡೆಸಿ ತಮ್ಮ ಅನುಮಾನಗಳನ್ನು
ಬಗೆಹರಿಸಿಕೊಳ್ಳಬಹುದಾಗಿದ್ದು, ವಿದ್ಯಾರ್ಥಿಗಳು ಈ
ತಂತ್ರಾಂಶದ ಉಪಯೋಗವನ್ನು ವಿದ್ಯಾರ್ಥಿಗಳು
ಪಡೆಯುವ ಮೂಲಕ ಜ್ಞಾನಾರ್ಜನೆಯನ್ನು
ಮಾಡಿಕೊಳ್ಳುವಂತೆ ಬಾಪೂಜಿ ಇಂಜಿನಿಯರಿಂಗ್ ಮತ್ತು
ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ||
ಹೆಚ್.ಬಿ.ಅರವಿಂದ್ ಅವರು ಆಶಿಸಿದ್ದಾರೆ.
ನವೀನ ತಂತ್ರಜ್ಞಾನದ ಅಳವಡಿಕೆಯಿಂದ ವಿದ್ಯಾರ್ಥಿಗಳು
ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದರಲ್ಲಿ
ಯಾವುದೇ ಅನುಮಾನವಿಲ್ಲ ಎಂದು
ಅಭಿಪ್ರಾಯಪಟ್ಟಿರುವ ಪ್ರಾಂಶುಪಾಲರು ಈ ತಂತ್ರಾಂಶದ
ಉಪಯೋಗವನ್ನು ಇತರ ಕಾಲೇಜಿನ ವಿದ್ಯಾರ್ಥಿಗಳು
ಪಡೆಯಬಹುದು ಎಂದು ತಿಳಿಸಿದ್ದಾರೆ.