ದಾವಣಗೆರೆ : ಕರೋನಾ ಮಹಾಮಾರಿಯಿಂದಾಗಿ ಇಂದು ಜನತೆ
ಅಷ್ಟೇ ಅಲ್ಲದೇ ಸರ್ಕಾರಗಳು ಸಹ ಆರ್ಥಿಕ ಸಂಕಷ್ಟ
ಪರಿಸ್ಥಿತಿಯಲ್ಲಿದ್ದು, ಸ್ವಂತ ಪ್ರಧಾನಮಂತ್ರಿಗಳು
ಮತ್ತು ಮುಖ್ಯಮಂತ್ರಿಗಳೇ ನೆರವು ನೀಡುವಂತೆ
ಮನವಿ ಮಾಡಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು 50 ಲಕ್ಷ ರೂ.ಗಳ
ಅನುದಾನವನ್ನು ನೀಡಿದ್ದಾರೆ.
ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 50
ಲಕ್ಷ ರೂ.ಗಳ ಅನುದಾನವನ್ನು ಮುಖ್ಯಮಂತ್ರಿಗಳ
ಕೋವಿಡ್-19 ಪರಿಹಾರ ನಿಧಿಗೆ ನೀಡುವಂತೆ ದಾವಣಗೆರೆ
ಉಪವಿಭಾಗಾಧಿಕಾರಿಗಳ ಮೂಲಕ ಪತ್ರವನ್ನು
ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ
ವಿಶ್ವನಾಥ ಮುದ್ದಜ್ಜಿ, ತಹಶೀಲ್ದಾರ್ ಗಿರೀಶ್
ಮತ್ತಿತರರಿದ್ದರು.

Leave a Reply

Your email address will not be published. Required fields are marked *