
ದಾವಣಗೆರೆ ಜಿಲ್ಲೆ;- ದಾವಣಗೆರೆ ಕೆ.ಪಿ.ಸಿ.ಸಿ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಏಪ್ರೀಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಇರುವ ಕಾರಣ ಬೆಳಗ್ಗೆ 10 ಗಂಟೆಗೆ ತಾವುಗಳು ತಮ್ಮ ತಮ್ಮ ಮನೆಯಲ್ಲಿ ಇದ್ದು ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ಸಂವಿಧಾನದ ಪಿತಾಮಹಾರವರಿಗೆ ಗೌರವ ಸಲ್ಲಿಸುವಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಗೆ ನಾಡಿನ ಜನತೆಗೆ ಕರೆ ನೀಡಿರುತ್ತಾರೆ.

ಆದ್ದರಿಂದ ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕದ ಅಧ್ಯಕ್ಷರುಗಳು,
ಉಪಾಧ್ಯಕ್ಷರುಗಳು,ಹಾಗೂ ಕಾರ್ಯದರ್ಶಿಗಳು ಮತ್ತು ಬೂತ್ ಮಟ್ಟದ ಕಾರ್ಯಕರ್ತರುಗಳು ಏಪ್ರೀಲ್ 14ರಂದು ಸಂವಿಧಾನ ಪೀಠಿಕೆ ಓದುವುದರ ಮೂಲಕ ಜಯಂತಿಯನ್ನು ಆಚರಣೆ ಮಾಡಲು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು ಮನವಿ ಮಾಡಿಕೊಂಡಿದ್ದಾರೆ.