ದಾವಣಗೆರೆ: ಕೇಂದ್ರದ ಮಾಜಿ ಸಚಿವರಾದ
ಎಂ.ವಿ.ರಾಜಶೇಖರನ್ ಅವರ ನಿಧನಕ್ಕೆ ಮಾಜಿ ಸಚಿವರೂ, ಹಾಲಿ
ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು
ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತೀವ್ರ
ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪನವರ
ಅಳಿಯ ಎಂ.ವಿ.ರಾಜಶೇಖರನ್ ಅವರು ರಾಜ್ಯಸಭಾ ಸದಸ್ಯರಾಗಿ,
ಕೇಂದ್ರ ಸರ್ಕಾರದ ಸಚಿವರಾಗಿದ್ದರು ಸಹ ಒಂದೇ
ಒಂದು ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿಯಾಗಿದ್ದರು
ಎಂದು ತಮ್ಮ ಸಂತಾಪ ಸೂಚಕದಲ್ಲಿ ಕಂಬನಿ ಮಿಡಿದಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ
ಅವರ ಕುಟುಂಬವರ್ಗಕ್ಕೆ ಹಾಗೂ ಪಕ್ಷದ
ಕಾರ್ಯಕರ್ತರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಆ
ಭಗವಂತನಲ್ಲಿ ಮಾಜಿ ಸಚಿವರೂ, ಹಾಲಿ ಶಾಸಕರಾದ ಡಾ||
ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವರಾದ
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಪ್ರಾರ್ಥಿಸಿದ್ದಾರೆ.