ನ್ಯಾಮತಿ ಗ್ರಾಮ ಪಂಚಾಯಿತಿ ಆಸ್ತಿಗೆ ಸಂಬಂದಪಟ್ಟಂತೆ ಪಿ.ಡಿ.ಓರವರು ಪೊಲೀಸ್ ಇಲಾಖೆಗೆ ದೂರನ್ನು ದಾಖಲೆ ಮಾಡಿರುವ ಹಿನ್ನಲೆಯಲ್ಲಿ ಆದರ ಸ್ಥಳ ಪರಿಶಿಲನೆಗೆ ಸೋಮವಾರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರೇಣುಕಮ್ಮ,ಉಪಧ್ಯಕ್ಷರಾದ ಗೀತಾ, ಪಿ.ಡಿ.ಒ ಮೆಹಬೂಬ್,ಕಾರ್ಯದರ್ಶಿಗಳು ಶಿವನಂದಪ್ಪ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಬಾಬು ಇವರ ಸಮ್ಮುಖದಲ್ಲಿ ನ್ಯಾಮತಿ ಪೊಲೀಸ್ ಇಲಾಖೆಯವರು ಸ್ಥಳ ಪರೀಶಿಲನೆ ನಡೆಸಿಸುತ್ತಿದ್ದಾಗ ರವಿ ತೊಂಟದಾರ್ಯ ಅವರ ಮಕ್ಕಳಾದ ನಂದೀಶ್ ಮತ್ತು ಶಶಿಧರ್ ಎಂಬುವರು ಏಕಾಏಕಿ ಸಬ್ಬ್ ಇನಿಸ್ಪೆಕ್ಟರ್
ಹನುಮಂತಪ್ಪ ಶಿರಹಳ್ಳಿ , ಕೆ.ಬಿ ವಿಜಯಾ , ಚನ್ನೇಶ್ .ಎ.ಹೆಚ್ ಪೋಲಿಸ್ ಇವರುಗಳ ಮೇಲೆ ತಳ್ಳಾಟ ನೆಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಸೆಕ್ಷನ್ 353, 332, 506, ಐ.ಪಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂದಿಸಲಾಗಿದೆ.
ಖಂಡನೆ;- ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಿಗಳನ್ನು ಕೂಡಲೆ ಬಂದಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಮತಿ ತಾಲೂಕ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನ್ಯಾಮತಿ ನಾಗಾರಾಜಪ್ಪರವರು , ನಿರ್ದೇಶಕ ಕೆ.ಎಲ್ ಸುದೀರ್ ರವರು ,ಎ.ಬಿ.ಸಿ ನ್ಯೂಸ್
ಚಾನಲ್ ಹೊನ್ನಾಳಿರವರಿಗೆ ನ್ಯಾಮತಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.