ಮಹಾನಗರಪಾಲಿಕೆಯ 11 ನೇ ವಾರ್ಡಿನ ಕಾರ್ಪೊರೇಟರ್ ಸೈಯದ್ ಚಾರ್ಲಿ ರವರ ವತಿಯಿಂದ 1100 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆಹಾರ ಕಿಟ್ ಅನ್ನು ಶಾಸಕರಾದ ಡಾ!! ಶಾಮನೂರು ಶಿವಶಂಕರಪ್ಪರವರು 11 ನೇ ವಾರ್ಡ್ ನ ಬಡ ಕುಟುಂಬಗಳಿಗೆ ವಿತರಿಸಿದರು. ನಂತರ ಮಾತನಾಡಿದ ಶಾಸಕರು ಪಾಲಿಕೆ ಸದಸ್ಯರ ಈ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು, ಮತ್ತು ಎಲ್ಲಾ ಸದಸ್ಯರು ಇದೇ ತರ ಮುಂದೆ ಬರಬೇಕೆಂದು ತಿಳಿಸಿದರು,

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬರ್, ಕಾಂಗ್ರೆಸ್ ಮುಖಂಡರಾದ ಸೈಯದ್ ಸೈಫುಲ್ಲಾ, ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ತಂಜಿಮ್ ಅಧ್ಯಕ್ಷರಾದ ಸಾಧಿಕ್ ಪೈಲ್ವಾನ್ , ವಕ್ಫ್ ಅಧ್ಯಕ್ಷರಾದ ಸಿರಾಜ್ ಅಹಮದ್, ದಾದು ಸೆಟ್, ಪಾಲಿಕೆ ಸದಸ್ಯರುಗಳಾದ ಎ.ಬಿ ರಹೀಮ್ ಸಾಬ್, ಸ್ಥಳೀಯ ಮುಖಂಡರಾದ ಗಂಗರಾಜ್, ಪರಮೇಶ್ವರಪ್ಪ , ರುದ್ರಮ್ಮ, ಸದ್ದಾಮ್, ಕುಮಾರ್ , ಘಾಜಿ ಖಾನ್, ಆರಿಫ್ ಪೈಲ್ವಾನ್, ವಾಸಿಂ,ಭಾಷಾ ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ 11ನೇ ವಾರ್ಡ್ 18 ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಸನ್ಮಾನಿಸಲಾಯಿತು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್. ಹರೀಶ್ ಬಸಾಪುರ ತಿಳಿಸಿದರು.

Leave a Reply

Your email address will not be published. Required fields are marked *