ಸದರಿ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲಿ ಗುತ್ತಿಗೆ ಆಧಾರದಲ್ಲಿ 26 ಜನ ಕರ್ತವ್ಯ ನಿರ್ವಹಿಸುತ್ತಿದ್ದು, ಇವರುಗಳು ಸುಮಾರು 2 ವರ್ಷಗಳಿಂದ ಕೆಲಸ ಮಾಡುತ್ತ ಬರುತ್ತಿದ್ದು, ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಂಟರ್ ಪ್ರೈಸಸ್ ಬೆಂಗಳೂರು[ಶ್ರೀನಿವಾಸ] ಇವರಿಗೆ ಟೆಂಡರ್ ಆಗಿದ್ದು, ಇವರು ಆಸ್ಪತ್ರೆಯಲ್ಲಿ ಕ್ಲಿನಿಕ್ ಮತ್ತು ನಾನ್ಕ್ಲಿನಿಕ್ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ಸರಿಯಾದ ರೀತಿಯಲ್ಲಿ ಅಂದರೆ ಕಳೆದ 10 ತಿಂಗಳಿಂದ ತಿಂಗಳ ವೇತನ ಮತ್ತು ಪಿ.ಎಫ್. ಮತ್ತು ಇ.ಎಸ್.ಐ ಸೌಲಭ್ಯವನ್ನು ನೀಡದೇ ಬಂದಿದ್ದು, ಗುತ್ತಿಗೆದಾರರು ಕಳೆದ ಡಿಸೆಂಬರ್ ತಿಂಗಳವರೆಗೆ ಸಾರ್ವಜನಿಕ ಆಸ್ಪತ್ರೆಯಿಂದ ಸಂಪೂರ್ಣ ಬಿಲ್ನ್ನು ಮಾಡಿ ಪಡೆದುಕೊಂಡಿರುತ್ತಾರೆ. ಆದರೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲಸಗಾರರ ಸ್ಥಿತಿ ಒಂದು ಒತ್ತು ಊಟಕ್ಕೂ ಇಲ್ಲದೇ ಸ್ಥಿತಿ ಚಿಂತಾಚನಕವಾಗಿದ್ದು, ಮತ್ತು ಈಗ ಹಾಲಿ ಬಂದಿರುವ ಮಹಮಾರಿ ಕೊರೋನ್ ವೈರಸ್ನಿಂದ ದೃತಿಗೆಡದೇ ತಮ್ಮ ಪ್ರಾಣವನ್ನೇ ಬದಿಗಿಟ್ಟು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಯಾವುದೇ ರೀತಿಯ ಆರ್ಥಿಕ ಸಾಮಾಜಿಕ ಭದ್ರತೆ ಗುತ್ತಿಗೆದಾರರು ನೀಡಿರುವುದಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಪ್ರಧಾನ ಸಂಚಾಲಕರು ಡಿ.ಎಸ್.ಎಸ್.ಎ ಮಂಜುನಾಥ್ ಕುರುವ ಇವರು ಆರೋಪಿಸುತ್ತ.
ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಕ್ಲಿನಿಕ್ ಮತ್ತು ನಾನ್ ಕ್ಲಿನಿಕ್ 26 ಜನರಿಗೆ ವೇತನ ಮತ್ತು ಇತರೆ ಸೌಲಭ್ಯವನ್ನು ಬೇಗನೆ ಹೊದಗಿಸಿ ಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಎ.ಬಿ.ಸಿ. ಆನ್ ಲೈನ್ ಚಾನಲ್ ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿಕೊಂಡರು.