ದಾವಣಗೆರೆ ಮಾ.23
ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು
ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ
ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 14 ರಿಂದ ಮೇ 3 ರವೆರೆಗೆ
ಸಾರ್ವಜನಿಕ ಸ್ಥಳಗಳಲ್ಲಿ ಶುಶ್ರೂಷಾ ಉದ್ದೇಶಗಳನ್ನು,
ಶಾಸನಬದ್ಧ ಹಾಗೂ ನಿಯಂತ್ರಣ ಪ್ರಕಾರ್ಯಗಳನ್ನು
ಹೊರತುಪಡಿಸಿ ಸಿಆರ್‍ಪಿಸಿ ಸೆಕ್ಷನ್ 144 ರನ್ವಯ 05 ವ್ಯಕ್ತಿಗಳಿಗಿಂತ
ಹೆಚ್ಚಿನ ಎಲ್ಲಾ ಸಮೂಹ ಒಗ್ಗೂಡುವಿಕೆಯನ್ನು
ನಿಷೇಧಿಸಲಾಗಿದೆ.
ಜೊತೆಗೆ ಎಲ್ಲಾ ಧರ್ಮಗಳ ಪ್ರಾರ್ಥನಾ ಮತ್ತು
ಹಬ್ಬಗಳ ಒಗ್ಗೂಡುವಿಕೆ ಸಹ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ
ಆದೇಶ ಉಲ್ಲಂಘಿಸಿದವರ ವಿರುದ್ಧ ಕಲಂ 188 ಮತ್ತು ವಿಪತ್ತು
ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್ 51 ರಿಂದ 60ರ ಪ್ರಕಾರ
ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ ಆದೇಶಿಸಿದ್ದಾರೆ.