ದಾವಣಗೆರೆ ಜಿಲ್ಲೆ;-ಏ 16 ಹೊನ್ನಾಳಿ ತಾಲೂಕು “ದಿನ ಬಳಕೆ ವಸ್ತುಗಳು ಸಿಗದೆ ಕಂಗಾಲದ ನಿವೃತ್ತ ಸೈನಿಕರು”
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ನಿವೃತ್ತ ಸೈನಿಕ ಸಂಘದ ಅಧ್ಯಕ್ಷರಾದ ಎಂ ವಾಸಪ್ಪನವರು ಎ.ಬಿ.ಸಿ ನ್ಯೂಸ್ ಆನ್ ಲೈನ್
ಚಾನಲ್ ಪತ್ರಿಕಾಗೊಷ್ಠಿ ಮೂಲಕ ಮಾತನಾಡಿ ಲಾಕ್ ಡೌನ್ ಇರುವ ಕಾರಣ ದಾವಣಗೆರೆ , ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಮಾಜಿ ಸೈನಿಕರುಗಳಿಗೆ ದಿನ ಬಳಕೆ ವಸ್ತುಗಳು ಸಿಗದೇ ತೊಂದರೆಯಾಗಿದ್ದು. ಈ ಮೂರು ಜಿಲ್ಲೆಗಳಿಗೆ ಎನ್.ಸಿ.ಸಿ (ಬಿ ಎನ್) ಕ್ಯಾಂಟಿನ್ ಶಿವಮೊಗ್ಗ ಆಗಿದ್ದು ನಾವುಗಳು ದಿನ ಬಳಕೆ ವಸ್ತುಗಳನ್ನು ತರಬೇಕಾದರೆ ಶಿವಮೊಗ್ಗ ಕ್ಕೆ ಹೊಗಬೇಕಾಗುತ್ತದೆ ಆದ ಕಾರಣ ಮಾನ್ಯ
ಹೊನ್ನಾಳಿಯ ತಾಲೂಕಿನ ತಹಶೀಲ್ದಾರ್ ರವರಿಗೆ ಕೇಳಿದಾಗ ನಮಗೆ ಪಾಸ್ ಕೊಡಲಿಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ,
ಆದ್ದರಿಂದ ದಾವಣಗೆರೆ ಜಿಲ್ಲಾಧಿಕಾರಿಗಳು ನಿವೃತ್ತ ಸೈನಿಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾವು ಬದುಕಲಿಕ್ಕೆ ದಿನ ಬಳಕೆ ವಸ್ತುಗಳನ್ನು ತರಲಿಕ್ಕೆ ಪಾಸಿನ ವ್ಯವಸ್ಥೆ ಮಾಡಿಕೊಡಬೇಕಾಗಿ ಈ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗೆಯವರಿಗೆ ಹೊನ್ನಾಳಿ ಮತ್ತು ನ್ಯಾಮತಿ ನಿವೃತ್ತ ಸೈನಿಕ ಸಂಘ ಅಧ್ಯಕ್ಷರ ಮನವಿ.

Leave a Reply

Your email address will not be published. Required fields are marked *