ದಾವಣಗೆರೆ ಏ.16
ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ
ರಾಜ್ಯಾದ್ಯಂತ ಮದ್ಯ ಮಾರಾಟ ನೀಷೆಧಿಸಿರುವ ಹಿನ್ನೆಲೆ ಸಿದ್ದವೀರಪ್ಪ
ಬಡಾವಣೆಯ 1663/60ಎ, 10ನೇ ಕ್ರಾಸ್, 10 ನೇ ಮೇನ್ ನಿವಾಸಿ ದಲ್ಲಾಳಿ
ಬಸವರಾಜಪ್ಪ, 57 ವರ್ಷ ಇವರು ಔಷಧಿ ಅಂಗಡಿಗಳಲ್ಲಿ
ದೊರೆಯುವ ಸರ್ಜಿಕಲ್ ಸ್ಪಿರಿಟ್ ಬಿ.ಪಿ ಯನ್ನು ಬಳಸಿ ನಕಲಿ ಮದ್ಯ
ತಯಾÀರಿಸಿ ಅಮಾಯಕ/ಪಾನೀಕರಿಗೆ ಮಾರಾಟ ಮಾಡುತ್ತಿದ್ದ
ಆರೋಪದ ಮೇರೆಗೆ ಅಬಕಾರಿ ಇಲಾಖೆ ದಾಳಿ ನಡೆಸಿ ಒಟ್ಟು 3 ಲೀಟರ್
ನೀರು ಮಿಶ್ರಿತ ಸರ್ಜಿಕಲ್ ಸ್ಪಿರಿಟ್ನ್ನು ವಶಪಡಿಸಿಕೊಂಡು
ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿ ವಿರುದ್ದ ಮೊಕದಮ್ಮೆಯನ್ನು ದಾಖಲಿಸಿ ಪ್ರಥಮ
ವರ್ತಮಾನ ವರದಿಯೊಂದಿಗೆ ಘನ ನ್ಯಾಯಲಯಯಕ್ಕೆ
ಸಲ್ಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ನಾಗರಾಜಪ್ಪ. ಟಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.