ದಾವಣಗೆರೆ ಏ.16  
ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ
ರಾಜ್ಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯ ಸರಬರಾಜು
ನಿಷೇಧಿಸಲಾಗಿದೆ. ಆದರೆ ಕೆಲವು ಸಮಾಜಘಾತುಕ ವ್ಯಕ್ತಿಗಳು
ದಾವಣಗೆರೆ ಜಿಲ್ಲೆಯಾದ್ಯಂತ ಸ್ಪಿರಿಟ್ (ಮದ್ಯಸಾರ) ನ್ನು ಬಳಸಿ ನಕಲಿ
ಮದ್ಯ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು
ಅಬಕಾರಿ ಇಲಾಖೆಯ ಗಮನಕ್ಕೆ ಬಂದಿದೆ.
ನಕಲಿ ಮದ್ಯ/ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಮನಷ್ಯನ
ಆರೋಗ್ಯವು ಹಾಳಾಗಿ ಲಿವರ್, ಕಿಡ್ನಿ ಇತರೆ ಅಂಗಾಂಗ
ವೈಫಲ್ಯತೆಯುಂಟಾಗಿ ಸಾವಿಗೀಡಾಗುವ ಸಂಭವವಿದೆ. ಆದ್ದರಿಂದ
ಅಕ್ರಮವಾಗಿ ಮಾರಾಟ ಮಾಡುವ ನಕಲಿ ಮದ್ಯ/ಕಳ್ಳಭಟ್ಟಿ
ಸಾರಾಯಿಯನ್ನು ಸಾರ್ವಜನಿಕರು ಸೇವಿಸಬಾರದೆಂದು ಹಾಗೂ
ಇಂತಹ ನಕಲಿ ವ್ಯವಹಾರಗಳು ಕಂಡುಬಂದಲ್ಲಿ ಅಬಕಾರಿ ಇಲಾಖೆಯ
ಕಂಟ್ರೋಲ್ ರೂಂ ದೂರಾವಾಣಿ ಸಂಖ್ಯೆ 08192-235316 ಗೆ ಮಾಹಿತಿ
ನೀಡಬೇಕು ಎಂದು ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತಂಬಾಕು ಮಾರಾಟ ಮತ್ತು ಬಳಕೆ

ನಿಷೇಧ
ದಾವಣಗೆರೆ ಏ.16
ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ
ಕೋವಿಡ್-19 ಸೋಂಕಿತರು ಜಗಿಯುವ ತಂಬಾಕು
ಉತ್ಪನ್ನಗಳಾದ ಜರ್ದಾ, ಖೈನಿ, ಪಾನ್‍ಮಸಾಲ ಹಾಗೂ ತಂಬಾಕು
ಉತ್ಪನ್ನಗಳನ್ನು ಬಳಸಿ ಉಗುಳುವುದರಿಂದ ಒಬ್ಬರಿಂದ
ಇನ್ನೊಬ್ಬರಿಗೆ ರೋಗ ಹರಡುವ ಭೀತಿ ಇರುತ್ತದೆ. ಆದ್ದರಿಂದ
ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಕೋವಿಡ್-19
ಹತೋಟಿಗೆ ಬರುವವರೆಗೂ ತಂಬಾಕು ಹಾಗೂ ತಂಬಾಕು
ಉತ್ಪನ್ನಗಳನ್ನು ಜಿಲ್ಲೆಯಾದ್ಯಂತ ಅಂಗಡಿಗಳಲ್ಲಿ ಮಾರಾಟ

ಮಾಡುವುದು ಮತ್ತು ಸಾರ್ವಜನಿಕರು ಬಳಸುವುದನ್ನು
ನಿಷೇಧಿಸಲಾಗಿದೆ.
ಒಂದು ವೇಳೆ ಇದರ ಉಲ್ಲಂಘನೆಯಾದಲ್ಲಿ ಸಾಂಕ್ರಾಮಿಕ
ರೋಗಗಳ ಕಾಯಿದೆ-1897, ವಿಪತ್ತು ನಿರ್ವಹಣಾ ಕಾಯಿದೆ-2005, ಐಪಿಸಿ-
1860, ಸಿಆರ್‍ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ
ಜರುಗುಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದರೆ.

Leave a Reply

Your email address will not be published. Required fields are marked *