ದಾವಣಗೆರೆ: ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ
ಎಂ.ಎಸ್.ಶಿವಣ್ಣನವÀರ ನಿಧನಕ್ಕೆ ಮಾಜಿ ಸಚಿವರೂ, ಹಾಲಿ
ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು
ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತೀವ್ರ
ಸಂತಾಪ ವ್ಯಕ್ತಪಡಿಸಿದ್ದಾರೆ.
ಎಂ.ಎಸ್.ಶಿವಣ್ಣನವರು 1970ರಲ್ಲಿ ಸಿದ್ದಗಂಗಾ
ವಿದ್ಯಾಸಂಸ್ಥೆಯನ್ನು ಆರಂಭಿಸಿ ಈ ವರ್ಷಕ್ಕೆ 50
ವರುಷಗಳನ್ನು ಪೂರೈಸಲು ಅವಿರತ ಶ್ರಮಿಸಿ
ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹವನ್ನು
ನೀಡುವ ಮೂಲಕ ದಾವಣಗೆರೆ ನಗರಕ್ಕೆ ತಮ್ಮದೇ ಆದ
ಕೊಡುಗೆ ನೀಡಿದ್ದಾರೆ ಎಂದು ತಮ್ಮ ಸಂತಾಪ
ಸೂಚಕದಲ್ಲಿ ಕಂಬನಿ ಮಿಡಿದಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ
ಅವರ ಕುಟುಂಬವರ್ಗಕ್ಕೆ ಹಾಗೂ ಲಕ್ಷಾಂತರ ವಿದ್ಯಾರ್ಥಿ
ಸಮೂಹಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಆ
ಭಗವಂತನಲ್ಲಿ ಮಾಜಿ ಸಚಿವರೂ, ಹಾಲಿ ಶಾಸಕರಾದ ಡಾ||
ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವರಾದ
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಪ್ರಾರ್ಥಿಸಿದ್ದಾರೆ