ದಾವಣಗೆರೆ ಏ.18
ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳು ರೈತರಿಗೆ ವಾಹನ
ಖರೀದಿಗಾಗಿ ನೀಡಿದ ಸಾಲಗಳಿಗೆ 3 ತಿಂಗಳ ವರೆಗೆ ನೋಟಿಸ್
ನೀಡುವುದಾಗಲಿ ಜೊತೆಗೆ ಸಾಲ ವಸೂಲಿ ಮಾಡುವುದಾಗಲೀ
ಮಾಡಬಾರದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
ಅವರು ಸೂಚಿಸಿದರು.
ಶನಿವಾರ ದಾವಣಗೆರೆ ನಗರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ
ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರೈತರು ಖಾಸಗಿ ಕಂಪನಿಗಳಿಂದ ಪಡೆದ ಸಾಲವನ್ನು ಮರು
ಪಾವತಿಸಲು 3 ತಿಂಗಳು ಸಮಯಾವಕಾಶ ಮಾಡಿಕೊಡಬೇಕು.
ಸಾಲ ಮರು ಪಾವತಿಸಲು ಸಾಧ್ಯವಿರುವವರು
ಮರುಪಾವತಿಸಬಹುದು ಎಂದ ಅವರು ಲೇವಾದೇವಿಗಾರರು ಸಹ
ರೈತರಿಗೆ ನೀಡಿದ ಸಾಲವನ್ನು ಇನ್ನು ಮೂರು ತಿಂಗಳ ಕಾಲ
ಮರುಪಾವತಿಗಾಗಿ ಕೇಳಬಾರದು ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು
ಸೂಚಿಸಿದಂತೆ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ
ರೀತಿಯ ತೊಂದರೆಯಾಗಬಾರದು. ಹಣ್ಣು ತರಕಾರಿ ಹಾಗೂ ದಿನಸಿ
ಸರಬರಾಜು ಪೂರೈಕೆ ಮಾಡುವಲ್ಲಿ ತೊಂದರೆ ಆಗದಿರುವಂತೆ
ಅಧಿಕಾರಿಗಳು ಕ್ರಮ ವಹಿಸಬೇಕು. ದಪ್ಪ ಮೆಣಸು ಹಾಗೂ ಹೂ
ಬೆಳೆಗಾರರಿಗೆ ಮಾರುಕಟ್ಟೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದು,
ಮುಖ್ಯಮಂತ್ರಿಗಳು ಪರಿಹಾರ ನೀಡುವ ಭÀರವಸೆ ನೀಡಿದ್ದಾರೆ
ಎಂದರು.
ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿಗೆ ಮಾರಾಟಕ್ಕೆ
ತರುವಲ್ಲಿ ಯಾವುದೇ ರೀತಿಯ ಅಡಚಣೆಯಾಗಬಾರದು. ಈ
ನಿಟ್ಟಿನಲ್ಲಿ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು. ಚೆಕ್
ಪೋಸ್ಟ್‍ಗಳಲ್ಲಿ ರೈತರ ವಾಹನಗಳಿಗೆ ಯಾವುದೇ ರೀತಿಯ
ನಿರ್ಬಂಧ ಹಾಕಬಾರದು. ಅಗತ್ಯ ವಸ್ತುಗಳ ಸರಬರಾಜು
ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಬೇರೆ ಜಿಲ್ಲೆ
ಹಾಗೂ ರಾಜ್ಯಗಳಿಂದ ಬರುವಂತಹ ವಾಹನಗಳನ್ನು
ಚೆಕ್‍ಪೋಸ್ಟ್‍ನಲ್ಲಿ ತಪಾಸಣೆ ನಡೆಸಿ ವಾಹನ ಸೇರಿದಂತೆ ಚಾಲಕರು
ಹಾಗೂ ಕ್ಲೀನರ್‍ಗಳಿಗೆ ಸ್ಪ್ರೇ ನಡೆಸಬೇಕು ಎಂದರು.
ರಾಜ್ಯದಲ್ಲಿ ಕಳೆದ ಬಾರಿ ರೂ.13 ಸಾವಿರ ಕೋಟಿ ಸಾಲವನ್ನು ವಿವಿಧ
ಸಹಕಾರಿ ಬ್ಯಾಂಕ್‍ಳಿಂದ ನೀಡಲಾಗಿದೆ. ಈ ಬಾರಿಯೂ ಸಹ ಅಷ್ಟೇ
ಮೊತ್ತದ ಸಾಲವನ್ನು ನೀಡಲು ಕ್ರಮ ವಹಿಸಲಾಗುವುದು.
ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಕೃಷಿ
ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲ ಎಂದು
ರೈತರೊಬ್ಬರು ಸಚಿವರ ಗವiನಕ್ಕೆ ತಂದಾಗ ಅದಕ್ಕೆ
ಪ್ರತಿಕ್ರಿಯಿಸಿದ ಸಚಿವರು, ಕೂಡಲೇ ಕೋಲ್ಡ್ ಸ್ಟೋರೇಜ್
ಸ್ಥಾಪನೆ ಕುರಿತು ಪ್ರಸ್ತಾವನೆ ಕಳುಹಿಸಿಕೊಟ್ಟಲ್ಲಿ ತಕ್ಷಣವೇ
ಮಂಜೂರಾತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಹಕಾರ ಇಲಾಖೆಯಿಂದ ಸಭೆ ನಡೆಸಿ ಈ ಸಾಲಿನಲ್ಲಿ ರೈತರಿಗೆ
ಎಷ್ಟು ಸಾಲ ನೀಡಬೇಕೆಂಬ ಬಗ್ಗೆ ಮಾರ್ಗಸೂಚಿಗಳನ್ನು
ತಯಾರಿಸಲಾಗುತ್ತಿದೆ. ಮಳೆಗಾಲದ ನಂತರ ರೈತರಿಗೆ ಸಾಲದ
ಅವಶ್ಯಕತೆ ಇರುತ್ತದೆ. ರೈತರು ಪಹಣಿ ನೀಡಿ ಸಾಲ
ಪಡೆಯಬಹುದು ಹಾಗೂ ಸಾಲ ನವೀಕರಿಸಬಹುದು ಎಂದು
ತಿಳಿಸಿದರು.
ಮೈಸೂರಿನ ನಂಜನಗೂಡಿನಲ್ಲಿನ ಜುಬಿಲಿಯೆಂಟ್
ಕಾರ್ಖಾನೆಯಲ್ಲಿ ಒಟ್ಟು 1562 ಕಾರ್ಮಿಕರಿದ್ದಾರೆ. ಅವÀರೆÀಲ್ಲರಿಗೂ
ಕೊರೊನಾ ಸೋಂಕು ಕುರಿತು ತಪಾಸಣೆ ನಡೆಸಲಾಗುತ್ತಿದೆ.
ಈಗಾಗಲೇ 1200 ಕಾರ್ಮಿಕರಿಗೆ ತಪಾಸಣೆ ನಡೆಸಲಾಗಿದ್ದು,
ಉಳಿದವರ ತಪಾಸಣೆ ನಡೆಯುತ್ತಿದೆ. ದೆಹಲಿಯ ತಬ್ಲಿಘ್
ಕಾರ್ಯಕ್ರಮಕ್ಕೆ ಹೋಗಿಬಂದ 80 ಜನರನ್ನು ತಪಾಸಣೆಗೆ
ಒಳಪಡಿಸಲಾಗಿದ್ದು, 8 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಚಿಕಿತ್ಸೆ
ನೀಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಮ್.ಸಿದ್ದೇಶ್ವರ್, ಶಾಸಕಾರದ
ಎಮ್.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ, ಎಸ್.ಎ.ರವಿಂದ್ರನಾಥ್,
ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್, ಎಪಿಎಂಸಿ ಅಧ್ಯಕ್ಷರಾದ
ಶಾಂತರಾಜ, ಮಾಜಿ ಮುದೇಗೌಡ್ರ ಗಿರೀಶ್, ಉಪಾಧ್ಯಕ್ಷ
ಎಸ್.ಕೆ.ಚಂದ್ರಶೇಖರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,
ಉಪವಿಭಾಗಾಧಿಕಾರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಮಮತಾ
ಹೊಸಗೌಡರ್, ತಹಶೀಲ್ದಾರ್ ಬಿ.ಎನ್.ಗಿರೀಶ್, ಎಪಿಎಂಸಿ ಕಾರ್ಯದರ್ಶಿ
ಪ್ರಭು, ಎಪಿಎಂಸಿ ಸಹಾಯಕ ನಿರ್ದೇಶಕ ಸೋಮಶೇಖರ್, ಜಿಲ್ಲಾ
ಬಿಜೆಪಿ ಅಧ್ಯಕ್ಷ ಹನಗವಾಡಿ ವಿರೇಶ್ ಮತ್ತಿತರರು ಹಾಜರಿದ್ದರು.