ಕೋರೋನಾ ವೈರಸ್ನ ಹರಡುವಿಕೆ ತಡೆಗಟ್ಟುವ ಹಾಗೂ ನಿಯಂತ್ರಣಕ್ಕಾಗಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕಿಗೆ ಬರುವುದರಿಂದ ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ಈ ಕುರಿತು ಜನರ ಅನಗತ್ಯ ಓಡಾಟವನ್ನು ತಪ್ಪಿಸಲು ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ ಹಣದ ಅವಶ್ಯಕತೆ ಇರುವುದನ್ನು ಮನಗಂಡು ತಾಲೂಕಿನ ಎಲ್ಲಾ ಬ್ಯಾಂಕ್ ಗಳ ಬ್ಯಾಂಕ್ ಕೊ ಆರ್ಡಿನೇಟರ್ ಅವರ ಸಹಕಾರದೊಂದಿಗೆ ಗ್ರಾಮಗಳಿಗೆ ಹೋಗಿ ಮನೆ ಮನೆಗೆ ಭೇಟಿ ನೀಡಿ ವಿವಿಧ ಪಿಂಚಣಿ ಹಣ ಹಾಗೂ ಜನ್ ಧನ್ ಖಾತೆಯ ಹಣ ಮತ್ತು ಸಂಬಂಧಿಸಿದ ಬ್ಯಾಂಕ್ ನ ಗ್ರಾಹಕರಿಗೆ ತುರ್ತು ಹಣದ ಅವಶ್ಯಕತೆಗೆ ತಕ್ಕಂತೆ ಹಣ ವಿತರಣೆಗೆ ಯೋಜನೆಯನ್ನು ರೂಪಿಸಲಾಗಿತ್ತು ಈ ಕುರಿತು ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಗ್ರಾಮಗಳಲ್ಲಿ ವ್ಯಾಪಕ ಪ್ರಚಾರನಡೆಸಿ ಬ್ಯಾಂಕ್ನ ಕೋಆರ್ಡಿನೇಟರ್ ರವರ ಸಹಕಾರದೊಂದಿಗೆ ತಾಲೂಕಿನಲ್ಲಿ ಗ್ರಾಮಗಳಲ್ಲಿ ಏಪ್ರಿಲ್ 13 ರಿಂದ ಏಪ್ರಿಲ್ 18 ರವರೆಗೆ ಆರು ದಿನಗಳಲ್ಲಿ ಹೊನ್ನಾಳಿ ತಾಲೂಕಿನ 6225 ಜನರಿಗೆ ಒಂದು ಕೋಟಿ ನಲವತ್ತು ಲಕ್ಷ (14000000) ಹಣವನ್ನು ವಿತರಿಸಲಾಗಿರುತ್ತದೆ ಕಂದಾಯ ಇಲಾಖೆಯ ನೌಕರರು ಬ್ಯಾಂಕ್ ನ ಸಹಕಾರದೊಂದಿಗೆ ಗ್ರಾಮಗಳಿಗೆ ತೆರಳಿ ಹಣವನ್ನು ವಿತರಿಸುವ ಯೋಜನೆಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು ಸಾಕಷ್ಟು ಜನರು ಮೆಚ್ಚುಗೆಯನ್ನು ಸೂಜಿಸಿರುತ್ತಾರೆ