ದಾವಣಗೆರೆ ಏ.20
ಮಾರ್ಚ್ 26ರಂದು ಪಾಸಿಟಿವ್ ಕೇಸ್ ವರದಿಯಾದ ರೋಗಿ-63ರ
ವಾಸಸ್ಥಳ ಅಂದರೆ ಇವರ ಮನೆ (ನಿಜಲಿಂಗಪ್ಪ ಬಡಾವಣೆಯ)
ಇರುವ ರಸ್ತೆಯನ್ನು ಒಳಗೊಂಡ ಭೌತಿಕ 100 ಮೀ. ಪರಿಧಿಯ
ಇಡೀ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಹಾಗೂ ಸದರಿ
ನಿಯಂತ್ರಿತ ವಲಯದ ಸುತ್ತ ಇರುವ ಪ್ರದೇಶ 5 ಕಿ.ಮೀ.
ವ್ಯಾಪ್ತಿ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ.
ನಿಯಂತ್ರಿತ ವಲಯ (ನಿಜಲಿಂಗಪ್ಪ ಬಡಾವಣೆಯ) ಚೆಕ್ಕುಬಂಧಿ:
ಪೂರ್ವ- 2ನೇ ಕ್ರಾಸ್, 1ನೇ ಮೇನ್ ರಿಂದ 2ನೇ ಮೇನ್‍ವರೆಗೆ,
ಪಶ್ಚಿಮ- 6ನೇ ಕ್ರಾಸ್, 1ನೇ ಮೇನ್ ರಿಂದ 2ನೇ ಮೇನ್‍ವರೆಗೆ,
ಉತ್ತರ- ಅಮೃತಾ ವಿದ್ಯಾಲಯ ಶಾಲೆ 1ನೇ ಮುಖ್ಯ ರಸ್ತೆ, ದಕ್ಷಿಣ-
2ನೇ ಮುಖ್ಯ ರಸ್ತೆವರೆಗೆ ಕಾರ್ಯ ವಿಧಾನದ ಅನುಸಾರ
ಕಾರ್ಯ ನಿರ್ವಹಿಸಲಾಗುವುದು.
ಕೋವಿಡ್-19 ವೈರಸ್ ನಿಯಂತ್ರಣ ಕಾರ್ಯತಂತ್ರಗಳ
ಸುಲಭ ಅನುಷ್ಠಾನಕ್ಕಾಗಿ ನಿಯಂತ್ರಿತ ವಲಯ, ಬಫರ್
ವಲಯಗಳನ್ನಾಗಿ ವಿಭಾಗಿಸಿ ಅವುಗಳ ನಿರ್ವಹಣೆಗಾಗಿ
ಕಾರ್ಯತಂತ್ರ ರೂಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ
ಮೇರೆಗೆ ಏ.17ರಂದು ನಿಗಧಿಪಡಿಸಿ ಅಗತ್ಯ ಕ್ರಮ
ಕೈಗೊಳ್ಳಲು ಸೂಚಿಸಿದ ಮೇರೆಗೆ ನಿಯಂತ್ರಿತ ವಲಯ
(ನೋವೆಲ್ ಕೊರೊನಾ ವೈಸರ್-ಪಾಸಿಟಿವ್ ವ್ಯಕ್ತಿಯ ನಿವಾಸ ಇರುವ
ಸುತ್ತಮುತ್ತಲಿನ ಪ್ರದೇಶ) ಪ್ರದೇಶದಲ್ಲಿ ವೈರಸ್
ಸೋಂಕು ಹರಡದಂತೆ ತೀವ್ರ ತರಹದ ಕ್ರಮಗಳನ್ನು
ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ.
ಈ ಪ್ರದೇಶದಲ್ಲಿ ಹಿಂದಿನ ಬಾರಿ ಪಾಸಿಟಿವ್ ಪ್ರಕರಣ ವರದಿಯಾದ 28
ದಿನಗಳ ಅವಧಿಯಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣ
ಆ ಪ್ರದೇಶದಲ್ಲಿ ವರದಿಯಾಗಿರಬಾರದು ಅಥವಾ ನಿಯಂತ್ರಿತ
ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಪ್ರಾಥಮಿಕ ಮತ್ತು ದ್ವಿತೀಯ
ಸಂಪರ್ಕ ಹೊಂದಿರುವ ವ್ಯಕ್ತಿಗಳು ಸಕ್ರಿಯ ಗೃಹ
ದಿಗ್ಭಂಧನಲ್ಲಿ ಇಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಘೋಷಣೆ
ಮಾಡಲಾಗಿದೆ.
ಘಟನಾ ಕಮಾಂಡರ್ ನೇಮಕ: ಪ್ರತಿಯೊಂದು ನಿಯಂತ್ರಿತ
ವಲಯಕ್ಕೆ ಒಬ್ಬ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಒಂದನೇ
ದರ್ಜೆಯ ಅಧಿಕಾರಿಗೆ ದಂಡಾಧಿಕಾರಿಯ ಅಧಿಕಾರಿಗಳನ್ನು ನೀಡಿ
ಅವರನ್ನು ಘಟನಾ ನಿಯಂತ್ರಕನನ್ನಾಗಿ ನೇಮಿಸಬೇಕಾದ
ಹಿನ್ನೆಲೆಯಲ್ಲಿ ಘಟನಾ ಕಮಾಂಡರ್ ಆಗಿ ದಾವಣಗೆರೆ ಉಪವಿಭಾಗಾಧಿಕಾರಿ
ಮಮತಾ ಹೊಸಗೌಡರ್ ಅವರನ್ನು ನೇಮಿಸಲಾಗಿದೆ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.