ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಏ 21 ಹೊನ್ನಾಳಿ ತಾಲೂಕು ಪೆಟ್ರೋಲ್ ಬಂಕ್ ಮಾಲೀಕರ ಸಂಘ ಹೊನ್ನಾಳಿ ತಾಲೂಕು ಇವರ ಸಂಯುಕ್ತಾಆಶ್ರಯದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಮಾಡಿರುವ ಕಾರಣ ಹೊನ್ನಾಳಿಯಲ್ಲಿ 200 ಕ್ಕೂ ಹೆಚ್ಚು ಮಾಲೀಕರು ಮತ್ತು ಆಟೋ ಚಾಲಕರುಗಳಿಗೆ ಒಂದು ತಿಂಗಳಿಂದ ದುಡಿಮೆ ಇಲ್ಲದೆ ಅವರುಗಳಿಗೆ ತೊಂದರೆಯಾಗಿರುವ ಕಾರಣ ಹೊನ್ನಾಳಿ ತಾಲೂಕಿನ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ವತಿಯಿಂದ ದಿನಬಳಕೆಯ ಆಹಾರದ ಪದಾರ್ಥಗಳಾದ ರವೆ, ಖಾರದ ಪುಡಿ, ಎಣ್ಣೆ, ಗೋದಿ ಹಿಟ್ಟು, ಪೇಸ್ಟ್, ಸೋಪ್ಪುಗಳು, ಇನ್ನು ಮುಂತಾದ ವಸ್ತುಗಳನ್ನು ಸೇರಿಸಿ 200 ಕ್ಕೂ ಹೆಚ್ಚು ಕಿಟ್ಟುಗಳನ್ನು ತಯಾರಿ ಮಾಡಿ ಆಟೋ ಚಾಲಕರುಗಳಿಗೆ ಕಿಟ್ಟುಗಳನ್ನು ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ರವರು ವಿತರಣೆ ಮಾಡಿದರು. ಎಂ.ಪಿ ಸಿದೇಶ್ವರ್, ಹೊನ್ನಾಳಿ ತಾಲೂಕಿನ ಶಾಸಕರಾದ ಎಂ.ಪಿ ರೇಣುಕಾಚಾರ್ಯ ಸಹ ಭಾಗಿಯಾಗಿದ್ದರು.
ಪೆಟ್ರೋಲ್ ಬಂಕ್ ಮಾಲೀಕರಾದ;- ರೀಲೀಯನ್ಸ್ ಬಂಕ್ ಮಾಲೀಕರಾದ ಡಿ ಎಸ್ ಪ್ರದೀಪ್ ಗೌಡ್ರು
ಜೋತಿ ಪ್ಯೋಯಲ್ ಬಂಕ್ ಮಾಲೀಕರಾದ ಎಂ ರಮೇಶ್
ಐ.ಓ.ಸಿ ಮಾಲೀಕರಾದ ಹೆಚ್ ಎ ಉಮಾಪತಿ
ಬಾಲಾಜಿ ಪ್ಯೋಯಲ್ ಚಿದಾನಂದ ಜಿ.ಪಿ
ಶ್ರೀನಿವಾಸ ಪೆಟ್ರೋಲ್ ಬಂಕ್ ಜಿ.ಪಿ ಗಿರೀಶ್
ಮಿನರ್ವ ಪೆಟ್ರೋಲ್ ಬಂಕ್ ಸುರೇಶ್
ಶ್ರೀ ಶಾಂತ ಪ್ಯೋಯಲ್ ನಿಜಲಿಂಗಪ್ಪ ಎಸ್ ಎನ್
ಶಿವ ಪೆಟ್ರೋಲ್ ಬಂಕ್ ಸಾಸ್ವೇಹಳ್ಳಿ ಹಾಲೇಶ್ ಕುಮಾರ್ ಇನ್ನು ಮುಂತಾದವರು ಭಾಗಿಯಾಗಿ ಆಟೋ ಕೂಲಿ ಕಾರ್ಮೀಕರುಗಳಿಗೆ ಪೆಟ್ರೋಲ್ ಬಂಕ್ ಮಾಲೀಕರುಗಳು ಸಹ ಕಿಟ್ಟ್ ಕೊಡುವುದರ ಮೂಲಕ ಸಹಾಯ ಹಸ್ತಚಾಚಿದರು.