ದಾವಣಗೆರೆ ಜಿಲ್ಲೆ ;- ಏ 21 ಕೆ.ಪಿ.ಸಿ.ಸಿ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಆದೇಶದ
ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಯುವ ಘಟಕ ಹಾಗೂ ಎನ್.ಎಸ್.ಯು.ಐ ವತಿಯಿಂದ ಜಿಲ್ಲಾ ಚಿಗಟೇರಿ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಭಂಡಾರದಲ್ಲಿ ರಕ್ತದಾನ ಶಿಬಿರ ಪಕ್ಷದ ವತಿಯಿಂದ ಏರಪಡಿಸಲಾಗಿತ್ತು ಕಾಂಗ್ರೆಸ್ ಪಕ್ಷದ 32 ಜನ ಕಾರ್ಯಕರ್ತರುಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಕೆ.ಪಿ.ಸಿ.ಸಿ ಮಾಧ್ಯಮ ವಿಶ್ಲೇಷಕರಾದ ಡಿ ಬಸವಾರಾಜ್ ರವರು, ಮತ್ತು ಡಿ.ಸಿ.ಸಿ ಜನರಲ್ ಸೆಕುರೆಟ್ರೀ ದಿನೇಶ್ ಶೆಟ್ಟಿರವರು, ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಎ ನಾಗರಾಜ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎ ಎಲ್ ಹರೀಶ್, ಉಪಧ್ಯಕ್ಷರಾದ ಎಲ್ ಎಂ ಸಾಗರ್,ಮಾಜಿ ಐ.ವೈ.ಸಿ ನ್ಯಾಷನಲ್ ಖಲಿಂ ಉಲ್ಲಾ, ಎನ್.ಎಸ್.ಯು.ಐ ಅಲೀರಾವತ್ ಮುಂತಾದವರು ರಕ್ತದಾನ ಮಾಡುವ ಮುಖಾಂತರ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.