ದಾವಣಗೆರೆ ಏ.22
ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ನಿಯಂತ್ರಣದಿಂದ
ಲಾಕ್ಡೌನ್ ಹಿನ್ನೆಲೆಯಲ್ಲಿ ಅನೇಕ ಕಲಾವಿದರು/ಸಾಹಿತಿಗಳು
ಸಂಕಷ್ಟದಲ್ಲಿದ್ದು, ಇವರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ
ವತಿಯಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗೆ ರೂ.2000 ಜಮಾ
ಮಾಡುವ ಮೂಲಕ ಆರ್ಥಿಕ ಸಹಾಯ ಮಾಡಲಾಗುವುದು.
ಆಸಕ್ತ ಕಲಾವಿದರು/ಸಾಹಿತಿಗಳು ಸ್ವವಿವರದ ಅರ್ಜಿಯಲ್ಲಿ
ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಐಎಫ್ಎಸ್ಸಿ ಕೋಡ್ ಹಾಗೂ
ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸುವ ಜತೆಗೆ ಅದರ
ಪ್ರತಿಗಳನ್ನು ಲಗತ್ತಿಸಬೇಕು.
ಈ ಮಾಹಿತಿಗಳನ್ನು ಏ.27 ರೊಳಗೆ ಬಿಳಿ ಹಾಳೆಯ ಮೇಲೆ
ತಮ್ಮ ಸ್ವವಿವರ ಒಳಗೊಂಡ ಅರ್ಜಿಯನ್ನು ಸಹಾಯಕ
ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಾವಣಗೆರೆ
ಇವರ ಇ-ಮೇಲ್ ಜಞಛಿ.ಜಚಿvಚಿಟಿಚಿgeಡಿe@gmಚಿiಟ.ಛಿom ಅಥವಾ ವಾಟ್ಸಾಪ್
ಮೊ.9964674993 ಸಂಖ್ಯೆಗೆ ಕಳುಹಿಸಬಹುದು.
ಆರ್ಥಿಕ ಸಹಾಯ ಪಡೆಯಲು ಮಾರ್ಗಸೂಚಿಗಳು: ಆರ್ಥಿಕ
ಸಂಕಷ್ಟದಲ್ಲಿರುವ ಎಲ್ಲಾ ಕಲಾಪ್ರಕಾರದ
ಕಲಾವಿದರು/ಸಾಹಿತಿಗಳಾಗಿರಬೇಕು. ಕಲಾವಿದರು/ಸಾಹಿತಿಗಳು
ಕನಿಷ್ಟ 10 ವರ್ಷ ಕಲಾಸೇವೆ ಸಲ್ಲಿಸಿರಬೇಕು. ವೃತ್ತಿನಿರತ
ಕಲಾವಿದರಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿ
ಇರುವವರಾಗಿರಬೇಕು. ಕನ್ನಡ ಮತ್ತು ಸಂಸ್ಕøತಿ
ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಇದಕ್ಕೆ
ಅರ್ಹರಿರುವುದಿಲ್ಲ. ಸರ್ಕಾರಿ
ನೌಕರರಾಗಿರಬಾರದು.(ರಾಜ್ಯ/ಕೇಂದ್ರ/ನಿಗಮ ಮಂಡಳಿ/ಸರ್ಕಾರಿ
ಅನುದಾನಿತ ಸಂಸ್ಥೆಗಳು ಮತ್ತು ಅರೆ ಸರ್ಕಾರಿ ಸಂಸ್ಥೆಗಳು)
ಕಲಾವಿದರು/ಸಾಹಿತಿಗಳ ಹೆಸರು, ಪೂರ್ಣವಿಳಾಸ, ದೂರವಾಣಿ
ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್ಎಸ್ಸಿ
ಕೋಡ್ (ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು
ಲಗತ್ತಿಸುವುದು)ಗಳನ್ನು ಕಡ್ಡಾಯವಾಗಿ ಅರ್ಜಿಯಲ್ಲಿ
ನಮೂದಿಸುವುದು. ತಪ್ಪು ಮಾಹಿತಿ ನೀಡಿ ಇದರ ಲಾಭ ಪಡೆದವರ
ಮೇಲೆ ವಿಪತ್ತು ನಿರ್ವಹಣಾ ಅಧಿನಿಯಮದನ್ವಯ ಕಾನೂನು
ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು
ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.