ದಾವಣಗೆರೆ ಏ.22
ಜಿಲ್ಲೆಯಲ್ಲಿ ಏಪ್ರಿಲ್ 21 ರಂದು 3.0 ಮಿ.ಮೀ ಮಳೆಯಾಗಿದ್ದು,
ಒಟ್ಟಾರೆ ರೂ.55 ಸಾವಿರ ನಷ್ಟ ಸಂಭವಿಸಿದೆ.
ಚನ್ನಗಿರಿಯಲ್ಲಿ ವಾಡಿಕೆ 1.0 ಮಿ.ಮೀ ಇದ್ದು 5.0 ಮಿ.ಮೀ ವಾಸ್ತವ
ಮಳೆಯಾಗಿದೆ. ದಾವಣಗೆರೆಯಲ್ಲಿ 1.0 ಮಿ.ಮೀ ವಾಡಿಕೆಗೆ 4.0 ಮಿ.ಮೀ
ವಾಸ್ತವ ಮಳೆಯಾಗಿದೆ. ಹರಿಹರದಲ್ಲಿ 1.0 ಮಿ.ಮೀ ವಾಡಿಕೆಗೆ 2.0
ಮಿ.ಮೀ ವಾಡಿಕೆ ಮಳೆಯಾಗಿದೆ. ಹೊನ್ನಾಳಿಯಲ್ಲಿ 1.0 ಮಿ.ಮೀ
ವಾಡಿಕೆಗೆ 1.0 ಮಿ.ಮೀ ವಾಸ್ತವ ಮಳೆಯಾಗಿದೆ. ಜಗಳೂರಿನಲ್ಲಿ 1.0
ಮಿ.ಮೀ ವಾಡಿಕೆಗೆ 1.0 ಮಿ.ಮೀ ವಾಸ್ತವ ಮಳೆಯಾಗಿದೆ. ಜಿಲ್ಲೆಯಲ್ಲಿ
ಸರಾಸರಿ 1.0 ಮಿ.ಮೀ ವಾಡಿಕೆಗೆ 3.0 ಮಿ.ಮೀ ವಾಸ್ತವ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಭಾಗಶಃ
ಹಾನಿಯಾಗಿದ್ದು, ರೂ.10 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಹಾಗೂ
1.20 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು ಅಂದಾಜು ರೂ. 40 ಸಾವಿರ
ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯ ಕಂಚಿಗನಾಳು ಗ್ರಾಮದ
ಸ.ನಂ 19-2 ರಲ್ಲಿ 0.22 ಎಕರೆ, 1.04 ಎಕರೆ, ಸ.ನಂ 2/4 ರಲ್ಲಿ 0.20
ಎಕರೆ ಕೊರಟಿಕೆರೆ ಗ್ರಾಮದ ಸ.ನಂ 289 ರಲ್ಲಿ 1.21 ಎಕರೆ ಒಟ್ಟು
3.25 ಎಕರೆ ಬಾಳೆ ಹಾನಿಯಾಗಿದ್ದು, ಅಂದಾಜು ರೂ.5 ಸಾವಿರ ನಷ್ಟ
ಸಂಭಿಸಿದ್ದು ಜಿಲ್ಲೆಯಲ್ಲಿ ಒಟ್ಟಾರೆ ರೂ.55 ಸಾವಿರ ನಷ್ಟ
ಸಂಭವಿಸಿದೆ.
ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ
ವಿತರಿಸಲು ಕ್ರಮ ವಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.